janadhvani

Kannada Online News Paper

ಸೆರ್ಕಳ ನಗರದಲ್ಲಿ ಸ್ವಾತಂತ್ರ್ಯ ದಿನ ಆಚರಣೆ

ಕೊಳ್ನಾಡು:ರಹ್ಮಾನಿಯಾ ಮದ್ರಸ ಕಮಿಟಿ ಸೆರ್ಕಳ ನಗರ ಹಾಗೂ ಎಸ್ಸೆಸ್ಸೆಫ್ ಸೆರ್ಕಳ ನಗರ ಶಾಖೆಯ ಜಂಟಿ ಆಶ್ರಯದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ದುಆ ಹಾಗೂ ಸಂದೇಶ ಭಾಷಣ ಸ್ಥಳೀಯ ಇಮಾಮರಾದ ಅಕ್ಬರ್ ಅಲಿ ಮದನಿ ಮಾಡಿದರು.
ದ್ವಜರೋಹಣ ರಹ್ಮಾನಿಯಾ ಮದ್ರಸ ಅಧ್ಯಕ್ಷರಾದ ಸಿ.ಎಚ್ ಅಬ್ದುಲ್ ರಝ್ಝಾಖ್ ನೆರವೇರಿಸಿದರು.

ಅಬ್ದುಲ್ ಹಮೀದ್ ಡಿ.ಕೆ,ರಹ್ಮಾನಿಯಾ ಮದ್ರಸ ಪ್ರ.ಕಾರ್ಯದರ್ಶಿ ಅಶ್ರಫ್ ಅಚ್ಚೊಟು,ಎಸ್ಸೆಸ್ಸಫ್ ಸೆರ್ಕಳ ನಗರ ಶಾಖೆ ಅಧ್ಯಕ್ಷರಾದ ಹನೀಫ್ ಜೆ.ಬಿ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಬಂಟ್ವಾಳ ಡಿವಿಶನ್ ಉಪಾಧ್ಯಕ್ಷರಾದ ಮುಹಮ್ಮದ್ ಅಲಿ ಮದನಿ ಕಾರ್ಯಕ್ರಮವನ್ನು ವಂದಿಸಿದರು.