janadhvani

Kannada Online News Paper

ಬಾಮಿ ಆಂಗ್ಲ ಮಾಧ್ಯಮ ಶಾಲೆ: 74ನೇ ಸ್ವಾತಂತ್ರೋತ್ಸವ ಆಚರಣೆ

ಗುರುಪುರ: ಬಾಮಿ ಆಂಗ್ಲ ಮಾಧ್ಯಮ ಶಾಲಾ ಆಡಳಿತಮಂಡಳಿ ಕಾರ್ಯದರ್ಶಿಗಳಾದ ಜನಾಬ್ ಅಬ್ದುಲ್ ಲತೀಫ್ ರವರು 74 ನೇ ಸ್ವಾತಂತ್ರೋತ್ಸವ ದ್ವಜಾರೋಹಣ ಕಾರ್ಯಕ್ರಮವನ್ನು ಕೋವಿಡ್-19 ಕೊರೋನ ಮಹಾಮಾರಿಯಿಂದಾಗಿ ಸಂಸ್ಥೆಯಲ್ಲಿ ಬಹಳ ಸರಳವಾಗಿ ಆಚರಿಸಿ ಶುಭ ಹಾರೈ ಸಿದರು.

ಸಂಸ್ಥೆಯ ಸಂಚಾಲಕರಾದ ಜನಾಬ್ ರಿಯಾಝ್.ಜಿ ಸಂದರ್ಭೋಚಿತವಾಗಿ ಮಾತನಾಡುತ್ತಾ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಹಿತೈಶಿಗಳಾದ ಶಾಹುಲ್ ಹಮೀದ್ ಯಂ.ಜಿ, ಹಂಝ ಪಿ.ಎಂ. ಮತ್ತು ಶಾಲಾ ದೈಹಿಕ ಶಿಕ್ಷಕರಾದ ಶರಣ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ನಾಯಕ ಅಮನ್ ರಾಹಿಬ್ ಸ್ವಾಗತಿಸಿದರು. ಸುಹೈಲ್ ವಂದನಾರ್ಪಣೆ ಮಾಡುವುದರೊಂದಿಗೆ ಚೊಕ್ಕದಾಗಿ ಕಾರ್ಯಕ್ರಮವನ್ನು ಮುಗಿಸಲಾಯಿತು.

error: Content is protected !! Not allowed copy content from janadhvani.com