janadhvani

Kannada Online News Paper

ಜೋಗಿಸರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ

ಹಿದಾಯತುಲ್ ಇಸ್ಲಾಂ ಜುಮಾ ಮಸೀದಿ ಮತ್ತು ಮದರಸ ಜೋಗಿಸರ ಹಾಗು ಎಸ್.ಎಸ್.ಎಫ್ ಜೋಗಿಸರ ಯುನಿಟ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.

ಹಿದಾಯತುಲ್ ಇಸ್ಲಾಂ ಜುಮಾ ಮಸೀದಿಯ ಧರ್ಮಗುರುಗಳು ಹಾಗು ಎಸ್.ಜೆ.ಎಮ್ ಬಾಳೆಹೊನ್ನೂರು ರೆಂಜ್ ನ ಅಧ್ಯಕ್ಷರು ಆದ ಇಬ್ರಾಹಿಮ್ ಮದನಿ ಮತ್ತು ಹಿದಾಯತುಲ್ ಇಸ್ಲಾಂ ಮಸೀದಿ ಅಧ್ಯಕ್ಷರು ಉಸ್ಮಾನ್ ಮತ್ತು ಹಿರಿಯರಾದ ಅಬ್ಬುಕಾಕ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಎಸ್.ಎಸ್.ಎಫ್ ಜೋಗಿಸರ ಯುನಿಟ್’ನ ಅಧ್ಯಕ್ಷರಾದ ಮುಸ್ತಫ ನಿರ್ವಹಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮಹಾನ್ ಹೋರಾಟಗಾರರ ತ್ಯಾಗೋಜ್ವಲ ಚರಿತ್ರೆಗಳನ್ನು ನೆನಪಿಸಲಾಯಿತು.ಸ್ವಾತಂತ್ರ ಹೋರಾಟವು ಅಂದಿನಂತೆ ಇಂದಿನ ಸಾಂದರ್ಭಿಕ ಪರಿಸ್ಥಿತಿಗಳನ್ನು ಹೆಮ್ಮೆಟ್ಟಿ ನಿಲ್ಲಲು ನ್ನಮಗೆ ಒಂದು ಮಾದರಿ ನಕ್ಷೆಯಾಗಿದೆ ಎಂದು ಖತೀಬರಾದ ಇಬ್ರಾಹಿಮ್ ಮದನಿ ತಿಳಿಸಿದರು.