ಬೆಳ್ತಂಗಡಿ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಕಳೆದ ಒಂದು ತಿಂಗಳ ಹಿಂದೆ ದಾಖಲಾಗಿದ್ದ ಕಾಜೂರು ನಿವಾಸಿಯೊಬ್ಬರು ನಿನ್ನೆ ಮರಣ ಹೊಂದಿದ್ದರು.ಮೃತಪಟ್ಟ ವ್ಯಕ್ತಿಯ ಕೊರೋನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಫ್ದ.ಕ.ಜಿಲ್ಲಾ ತುರ್ತು ಸೇವಾ ತಂಡವು ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ, ತಾಲೂಕಿನ ದಂಡಾಧಿಕಾರಿ ಮತ್ತು ವೈದ್ಯಾಧಿಕಾರಿಯ ನಿರ್ದೆಶನದಂತೆ, ಜಿಲ್ಲಾ ನಾಯಕ ನವಾಝ್ ಸಖಾಫಿ ಅಡ್ಯಾರ್ ರವರ ನೇತೃತ್ವದಲ್ಲಿ, ಕರೀಂ ಕೆದ್ಕಾರ್,ಮುಸ್ತಫಾ ಉರುವಾಲುಪದವು, ಸಿದ್ದೀಕ್ ಪರಪ್ಪು,ಎಂ.ಶರೀಫ್ ಸಖಾಫಿ ಉಜಿರೆಬೆಟ್ಟು,ಅಲ್ತಾಫ್ ಶಾಂತಿಬಾಗ್, ಶಿಹಾಬ್ ಕಕ್ಕೆಪದವು,ನೌಫಲ್ ಕಳಂಜಿಬೈಲು, ರನ್ನೊಳಗೊಂಡ ಜಿಲ್ಲಾ ತಂಡ ಧಪನ ಕಾರ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸಿತು.ದ.ಕ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ದುಆ ನೆರವೇರಿಸಿದರು.
ರಾಜ್ಯ ಉಪಾಧ್ಯಕ್ಷ ಸುಫ್ಯಾನ್ ಸಖಾಫಿ, ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ಜಿಲ್ಲಾ ನಾಯಕರಾದ ಇಕ್ಬಾಲ್ ಮಾಚಾರು, ಹಕೀಂ ಕಳಂಜಿಬೈಲು, ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಶರೀಫ್ ನಾವೂರು, ಡಿವಿಷನ್ ಸದಸ್ಯ ಮುಬೀನ್ ಉಜಿರೆ, ರಹ್ಮಾನಿಯ್ಯ ಜುಮ್ಮಾ ಮಸೀದಿ ಕಾಜೂರು ಅಧ್ಯಕ್ಷ ಇಬ್ರಾಹಿಂ ಕೆ.ಯು, ಪ್ರ.ಕಾರ್ಯದರ್ಶಿ ಸಿದ್ದೀಕ್ ಜೆ.ಹೆಚ್, ಕೋಶಾಧಿಕಾರಿ ಕಮಾಲ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಕೆ.ವಿ ಮುಂತಾದವರು ಉಪಸ್ಥಿತಿತರಿದ್ದರು.
ಮಸೀದಿಯ ಆಡಳಿತ ಸಮಿತಿ, ಆರೋಗ್ಯ ಇಲಾಖೆಯ ಅಧಿಕಾರಿಗಳ, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರ ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.















ಇನ್ನಷ್ಟು ಸುದ್ದಿಗಳು
ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ ಮುನೀರ್ ಕಾಟಿಪಳ್ಳ
ಪೆನ್ನು ಹಿಡಿಯುವ ಕೈಗಳು ಗಾಂಜಾ, ಚೂರಿ ಹಿಡಿಯುತ್ತಿದೆ: ಪೋಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು-ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್
ದಕ ಜಿಲ್ಲಾ ವಕ್ಪ್ ನಿಂದ ಶಾಸಕ ಐವನ್ ಡಿ ಸೋಜ ರಿಗೆ ಅಭಿನಂದನಾ ಸಮಾರಂಭ
ಭಾರಿ ಮಳೆ: ದ.ಕ ಜಿಲ್ಲಾ ಶಾಲೆಗಳಿಗೆ ನಾಳೆ ರಜೆ- ಜಿಲ್ಲಾಧಿಕಾರಿ ಘೋಷಣೆ
ಜಾತಿ ಮದ್ಯೆ ವೀಷ ಬೀಜ ಬಿತ್ತುತ್ತಿರುವ ಶಾಸಕನನ್ನು ಕೇಸು ದಾಖಲಿಸಿ ಕೂಡಲೇ ಬಂದಿಸಬೇಕು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಮಿಷನರ್ ಗೆ ದೂರು
ಸುಮೊಟೊ ದುರ್ಬಳಕೆಯಾಗುತ್ತಿರುವ ಆತಂಕವಿದೆ- ಎಸ್ಸೆಸ್ಸೆಫ್
ಕಾಣಿಯೂರು ಹಲ್ಲೆ ಪ್ರಕರಣ: ಯು.ಟಿ ಖಾದರ್ ಖಂಡನೆ- ಗೃಹ ಸಚಿವರೊಂದಿಗೆ ಮಾತುಕತೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೊಬೈಲ್ ನಂಬರ್ ಹ್ಯಾಕ್
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಉಡುಪಿ ಸ್ಕಾರ್ಫ್ ವಿವಾದ- ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಶಾಸಕರ ಭೇಟಿ