janadhvani

Kannada Online News Paper

ದಕ ಜಿಲ್ಲಾ ವಕ್ಪ್ ನಿಂದ ಶಾಸಕ ಐವನ್ ಡಿ ಸೋಜ ರಿಗೆ ಅಭಿನಂದನಾ ಸಮಾರಂಭ

ಜಿಲ್ಲೆಯ ಪ್ರಮುಖ ಗಣ್ಯ ನಾಯಕರ ಸಮ್ಮುಖದಲ್ಲಿ ವಕ್ಪ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಬೇಡಿಕೆಯಿಟ್ಟ ಅಲ್ಪಸಂಖ್ಯಾತ ಸಮಸ್ಯೆಗಳನ್ನು ‌ಸದನದಲ್ಲಿ ಪ್ರಸ್ತಾಪಿಸಿ ನ್ಯಾಯ ಒದಗಿಸುವ ಭರವಸೆ ನೀಡುತ್ತಾ ಸುಮಾರು 1 ತಾಸು 40 ನಿಮಿಷಗಳ ‌ಬಾಷಣದ ಮೂಲಕ ಚರ್ಚಿಸಿದರು.

ಂಗಳೂರು : ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಐವನ್ ಡಿಸೋಜ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ವತಿಯಿಂದ ಜಿಲ್ಲಾ ವಕ್ಪ್ ಸಭಾಂಗಣದಲ್ಲಿ ಜಿಲ್ಲೆಯ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷರಾದ ಬಿಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಅಲ್ಪಸಂಖ್ಯಾತ ಮುಸಲ್ಮಾನರ
1 ಮೀಸಲಾತಿ ರದ್ದತಿ ವಾಪಾಸ್ ಪಡೆದು, 2ಬಿ ಗೆ 4% ನ್ನು 7% ಮಾಡಬೇಕು
2 ಹಿಜಾಬ್ ನಿಷೇದ ಹಿಂಪಡೆಯಬೇಕು
3 ಎನ್ ಆರ್ ಸಿ ಅಮಾತತ್ವಯಕರ ಮೇಲಿನ ಕೇಸು ವಾಪಾಸು ಪಡೆಯಬೇಕು..
4 ಮಂಗಳೂರು ಗೋಲಿಬಾರ್ ನಲ್ಲಿ ಮಡಿದವರಿಗೆ ಬಿಜೆಪಿ ಪರಿಹಾರ ಘೋಷಿಸಿ ವಾಪಸ್ಸು ಪಡೆದದನ್ನು ಸರಕಾರದಿಂದ ಮರು ಘೋಷಣೆ ಮಾಡಿಸಬೇಕು ಹಗೂ ಗೋಲಿಬಾರ್ ಬಗ್ಗೆ ತನಿಖೆ ನಡೆಸಬೇಕು
7 ಕೋಮು ಭಾಷಣ ಮತ್ತು ಕೋಮು ವಿಷಬೀಜ ಬಿತ್ತುವವರ ವಿರುದ್ಧ ಕೇಸ್ ದಾಖಲಾದರೂ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಪ್ರಕರಣಗಳು ಇತೀಚೆಗೆ ಜಾಸ್ತಿಯಾಗುತ್ತಿದ್ದು,ಇದರ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿದಾಗ,ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವುದರಲ್ಲಿ ಪಿಪಿ ಗಳು ಹಾಗೂ ಸರಕಾರಿ ವಕೀಲರುಗಳ ಆಲಸ್ಯ ಮತ್ತು ಕರ್ತವ್ಯಲೋಪಗಳು ಎದ್ದು ಕಾಣುತ್ತಿದೆ.ಸಂಬಂಧಪಟ್ಟವರನ್ನು ತಾಕೀತು ಮಾಡುವ ಅಥವಾ ಆ ಹುದ್ದೆಗೆ ಪ್ರಾಮಾಣಿಕರನ್ನು ನೇಮಕ ಮಾಡುವುದು.

ಈ ಎಲ್ಲಾ ಬೇಡಿಕೆಗಳನ್ನು ಆಳಿಸಿದ ಶಾಸಕರು ಸುಮಾರು‌1 ತಾಸು 40 ನಿಮಿಷಗಳ ಬಾಷಣ ಮಾಡಿ ಮಂಗಳೂರಿನ ಎಲ್ಲಾ ಪ್ರಮುಖ ನಾಯಕರು ಉದ್ಯಮಿಗಳು ಸೇರಿರುವಂತಹ ಸಭೆಯಲ್ಲಿ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಸದನದಲ್ಲಿ ಪ್ರಸ್ತಾಪಿಸಿ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸಿ ಕೊಡುವಳ್ಳಿ ಪ್ರಾಮಾಣಿಕವಾಗಿ ನಾನು ಅತೀ ಶೀಘ್ರವಾಗಿ ಶ್ರಮಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದಂತಹ ಎಸ್ಎಮ್ ರಷೀದ್ ಹಾಜಿ, ಇಬ್ರಾಹಿಮ್ ಕೋಡಿಜಾಲ್ , ಝಕರಿಯ್ಯಾ ಜೋಕಟ್ಟೆ,ಶೇಖಬ್ಬ ಎಕ್ಷಪರ್ಟೈಸ್,ಬಿ ಎಂ ಮಮ್ತಾಝ್ ಅಲಿ, ಡಾ.ಶೇಖ್ ಬಾವ ಹಾಜಿ, ಮಾಜಿ ಮೇಯರ್ ಕೆ ಅಶ್ರಫ್, ಮುಹಮ್ಮದ್ ಹಾರಿಸ್ ,ಮನ್ಸೂರ್ ಅಝಾದ್, ಸಿರಾಜ್ ಬಜಪೆ, ಆಸಿಪ್ ಹೋಂ ಪ್ಲಸ್, ಅಬ್ದುಲ್ ಜಲೀಲ್ ಕೃಷ್ಣಾಪುರ,ಮೂಸಬ್ಬ ಬ್ಯಾರಿ, ಯಾಸೀನ್ ಕುದ್ರೋಳಿ, ಅಝೀಝ್ ಕುದ್ರೋಳಿ, ಮಕ್ಬೂಲ್ ಜಾಮಿಅ, ಕುದ್ರೋಳಿ, ಶಂಸುದ್ದೀನ್ ಕಂಡತ್ಪಳ್ಳಿ , ನಿಸಾರ್ ಕರಾವಳಿ,ಸಾಲಿಹ್ ಬಜಪೆ, ಮುಕ್ತಾರ್ ವಕೀಲರು,ಅಶ್ರಫ್ ಬದ್ರಿಯಾ, ವಕ್ಪ್ ಅಧಿಕಾರಿ ಅಬೂಬಕ್ಕರ್,ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಜಿನೇಂದ್ರ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರು ಯಶೋಧರ, ನೌಸೀರ್ , ಉಪಾಧ್ಯಕ್ಷ ರುಗಳಾದ ಪಕೀರಬ್ಬ ಮಾಸ್ಟರ್, ಎ ಕೆ ಜಮಾಲ್,ಅಬ್ದುಲ್ ರಹ್ಮಾನ್,ಅಶ್ರಫ್ ಕಿನಾರ,ಸದಸ್ಯರಾದ ಸಿದ್ದೀಖ್ ಕಾಜೂರು,ಹನೀಪ್ ಮಲ್ಲೂರು, ಸಾಕಿರ್ ಕಣ್ಣೂರು ಉಪಸ್ಥಿತರಿದ್ದು,,ಸೈದುದ್ದೀನ್ ಕಾರ್ಯಕ್ರಮ ನಿರರೂಪಿಸಿದರು.

error: Content is protected !! Not allowed copy content from janadhvani.com