janadhvani

Kannada Online News Paper

ಬಿಜೆಪಿ ಶಾಸಕರ ಕಾಲ ಬುಡಕ್ಕೆ ಕೊರೊನಾ ರೋಗ ಅಪ್ಪಳಿಸಿದ ನಂತರವೇ ಲಾಕ್ಡೌನ್ ನೆನಪಾಯಿತೇ? ಯೂತ್ ಕಾಂಗ್ರೆಸ್ ಕಿಡಿ

ಮಂಗಳೂರು: ಸುಮಾರು 5-6 ತಿಂಗಳಿಂದ ಕೋರೋನ ಎಂಬ ರೋಗವು ಈಗಾಗಲೇ ಮನೆ ಮನೆ ಮಾತಾಗಿದೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ covid-19 ಹೆಚ್ಚುತ್ತಿದೆ. ಈಗಾಗಲೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ covid-19 ಜಾಸ್ತಿ ಆಗುವುದು ಖಡಾ ಖಂಡಿತ ಆದುದ್ದರಿಂದ ಕಠಿಣ ಲಾಕ್ಡೌನ್ ಅತೀ ಮುಖ್ಯ ಎಂದು ಕೆಲವು ತಜ್ಞರು ತಿಳಿಸಿದ್ದರು. ಕೆಲವು ಸ್ಥಳಗಳಲ್ಲಿ ಸಾರ್ವಜನಿಕರೇ ಸ್ವಯಂ ಪ್ರೇರಿತ ಲಾಕ್ಡೌನ್ ಗೆ ಒಳಪಟ್ಟಿದ್ದು ಪ್ರಶಂಸನೀಯ.

ದೇಶದ, ರಾಜ್ಯದ ಆರ್ಥಿಕತೆಯನ್ನು ಒಂದು ಕಾರಣವನ್ನಾಗಿ ತಿಳಿಸಿ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿ ಎಂ, ಆರ್ ಅಶೋಕ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವುದು ನಾವೆಲ್ಲ ನೋಡಿದ್ದೇವೆ. ಈಗ ನೋಡಿದರೆ ಜುಲೈ 14 – 22 ರ ವರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಲಾಕ್ಡೌನ್ ಮಾಡುವುದಾಗಿ ಟ್ವಿಟ್ಟರ್ ಹಾಗು ಮಾದ್ಯಮಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ B.S.Y ಸರ್ಕಾರವು ಇಂದು ಕೋರೋಣದಲ್ಲಿ ಅಂತದ್ದೇನು ಭೀಕರತೆಯನ್ನು ಕಂಡಿದೆ ಎಂಬುದೇ ಪ್ರಶ್ನೆ ಯಾಗಿ ಉಳಿದಿದೆ.

ಇದಕ್ಕೆ ಉತ್ತರ ಹುಡುಕಲು ಮುಂದಾದರೆ ಇಂದು ಬಿ ಎಸ್ ವೈ ಆಪ್ತರು ಕೋರೋಣ ಸೊಂಕಿತರಾಗಿ ಇರುವುದು ಮತ್ತು ಸ್ವತಃ ಮುಖ್ಯಮತ್ರಿಗಳೇ ಕ್ವಾರಂಟೈನ್ ಅಲ್ಲಿ ಇರುವುದು ಕಾಣಬಹುದು. ಹಾಗಾದರೆ ಲಾಕ್ಡೌನ್ ಯಾರಿಗೆ? ಈಗ ರಾಜ್ಯದ ಆರ್ಥಿಕತೆ ಕುಗ್ಗುವುದಿಲ್ಲವೇ?

ಕೊರೋಣದಲ್ಲಿಯು ಕೂಡ ತನ್ನ ರಾಜಕೀಯ ನಡೆಸಿದ ಬಿಜೆಪಿ ಸರ್ಕಾರವು ಈಗ ಸ್ವತಃ ತಮ್ಮ ಬುಡಕ್ಕೆ ಕೋರೋಣ ಬಂದು ಅಪ್ಪಳಿಸಿದಾಗ ಲಾಕ್ಡೌನ್ ಮೊರೆ ಹೋಗಿದೆ. ಹಾಗಾದರೆ ಜನ ಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ? . ದಿನಕ್ಕೆ 60-70 ರಂತೆ ಜೀವಕಳೆದುಕೊಂಡವರ ಜೀವ ಜೀವವಲ್ಲವೆ? ವಿದ್ಯಾವಂತರ , ಬುದ್ದಿವಂತರ ಕೊರತೆ ಇರುವ ಈ ರಾಜ್ಯ ಸರಕಾರದಿಂದ ಜಾತಿ ರಾಜಕೀಯ ಮತ್ತು ವೈಯುಕ್ತಿಕ ಲಾಭದ ರಾಜಕೀಯವನ್ನು ಮಾತ್ರ ನಿರೀಕ್ಷಿಸಬಹುದಾಗಿದೆ.

error: Content is protected !! Not allowed copy content from janadhvani.com