ಮಂಗಳೂರು: ಕೊರೊನಾ ಲಾಕ್ಡೌನ್ ನಿಯಮಗಳ ಉಲ್ಲಂಘನೆ ಮಾಡಿ ಭರ್ಜರಿ ಮದುವೆ ಪಾರ್ಟಿ ಮಾಡಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಜೂನ್ 2 ರಂದು ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮುಂಜೆ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ರಾತ್ರಿ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಯುವಕರು ಡಿಜೆ ಪಾರ್ಟಿ ಆಯೋಜಿಸಿದ್ದರು.
ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಪ್ರಕರಣದ ಕುರಿತಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ತನಿಖೆಯನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ನಿಯಮದಂತೆ ಮದುವೆಗೆ 50 ಜನರು ಸೇರಿ ಮದುವೆ ಸಮಾರಂಭವನ್ನು ನಡೆಸಲು ಸ್ಥಳೀಯ ಪಂಚಾಯತ್ ನಿಂದ ಅನುಮತಿಯನ್ನು ಪಡೆದಿರುತ್ತಾರೆ.
ಯುವಕರ ನೃತ್ಯದ ವಿಡಿಯೋ ಲಾಕ್ಡೌನ್ ಸಮಯದಲ್ಲಿ ನಡೆದಿರುವುದೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಲಾಕ್ಡೌನ್ ಸಮಯದಲ್ಲಿ ನಡೆದಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ ಮುನೀರ್ ಕಾಟಿಪಳ್ಳ
ಪೆನ್ನು ಹಿಡಿಯುವ ಕೈಗಳು ಗಾಂಜಾ, ಚೂರಿ ಹಿಡಿಯುತ್ತಿದೆ: ಪೋಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು-ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್
ದಕ ಜಿಲ್ಲಾ ವಕ್ಪ್ ನಿಂದ ಶಾಸಕ ಐವನ್ ಡಿ ಸೋಜ ರಿಗೆ ಅಭಿನಂದನಾ ಸಮಾರಂಭ
ಭಾರಿ ಮಳೆ: ದ.ಕ ಜಿಲ್ಲಾ ಶಾಲೆಗಳಿಗೆ ನಾಳೆ ರಜೆ- ಜಿಲ್ಲಾಧಿಕಾರಿ ಘೋಷಣೆ
ಜಾತಿ ಮದ್ಯೆ ವೀಷ ಬೀಜ ಬಿತ್ತುತ್ತಿರುವ ಶಾಸಕನನ್ನು ಕೇಸು ದಾಖಲಿಸಿ ಕೂಡಲೇ ಬಂದಿಸಬೇಕು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಮಿಷನರ್ ಗೆ ದೂರು
ಸುಮೊಟೊ ದುರ್ಬಳಕೆಯಾಗುತ್ತಿರುವ ಆತಂಕವಿದೆ- ಎಸ್ಸೆಸ್ಸೆಫ್
ಕಾಣಿಯೂರು ಹಲ್ಲೆ ಪ್ರಕರಣ: ಯು.ಟಿ ಖಾದರ್ ಖಂಡನೆ- ಗೃಹ ಸಚಿವರೊಂದಿಗೆ ಮಾತುಕತೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೊಬೈಲ್ ನಂಬರ್ ಹ್ಯಾಕ್
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಉಡುಪಿ ಸ್ಕಾರ್ಫ್ ವಿವಾದ- ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಶಾಸಕರ ಭೇಟಿ