ಸರ್ಕಾರದ ಯೊಜನೆ ಅರ್ಹರಿಗೆ ದೊರೆಯುವಂತಾಗಲಿ
ದೇಶ ಕ್ಕೆ ದೇಶ ಕೋರೋಣ ದಿಂದ ತತ್ತರಿಸಿದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಡ ಅಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಲಾಕ್ ಡೌನ್ ಎದುರಿಸಲು ಏಕ ಕಂತಿನ ಐದು ಸಾವಿರ ರೂಪಾಯಿ ಪರಿಹಾರ ದನ ಘೊಷಿಸಿದ್ದು ಅತ್ಯಂತ ಶ್ಲಾಘನೀಯ ಮತ್ತು ಸ್ವಾಗತಾರ್ಹವಾಗಿದೆ.
ಆದರೆ ಈ ಮೊತ್ತ ಪಡೆಯಲು ಚಾಲಕರು ಭ್ಯಾಡ್ಜ್ ಹೊಂದಿರಲು ಕಡ್ಡಾಯ ಎಂಬ ನಿಯಮನ್ನು ಸಡಿಲಿಸಿ ಬ್ಯಾಡ್ಜ್ ರಹಿತ ಬಡ ಚಾಲಕರನ್ನು ಈ ಯೊಜನೆಗೆ ಪರಿಗಣಿಸಬೇಕೆಂದು ಕರ್ನಾಟಕ ರಾಜ್ಯ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಹಲವಾರು ಬಡ ಚಾಲಕರಲ್ಲಿ ಬ್ಯಾಡ್ಜ್ ಹೊಂದಿಲ್ಲ ಕೆಲವೊಂದು ಕಾರಣಗಳಿಂದ ಹಲವು ಚಾಲಕರು ಬ್ಯಾಡ್ಜ್ ಪಡೆದುಕೊಳ್ಳಲು ವಿಳಂಬವಾಗಿದ್ದು ಕೇವಲ ಡ್ರೈವಿಂಗ್ ಲೈಸೆನ್ಸ್ ಹೊಂದಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಓಡಿಸಿ ಸಂಸಾರ ಮಾಡುವವರಿಗೆ ಇದರಿಂದ ತೊಂದರೆಯುಂಟಾಗಿದೆ.
ಸರ್ಕಾರ ಸಧ್ಯ ಘೋಷಣೆ ಮಾಡಿರುವ ಪರಿಹಾರ ಪಡೆಯಲು ಬ್ಯಾಡ್ಜ್ ಕಡ್ಡಾಯ ಎಂಬ ನಿಯಮ ದಿಂದ ಇಂತಹ ಚಾಲಕರು ಪರಿಹಾರದಿಂದ ವಂಚಿತರಾಗುತ್ತಾರೆ. ಇಂತಹ ಚಾಲಕರು ಪರಿಹಾರದಿಂದ ವಂಚಿತರಾದರೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸರಕಾರದ ಯೊಜನೆಗಳು ತಲುಪುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಈ ಮೊದಲು ಹೊರಡಿಸಿದ ನಿಯಮದಲ್ಲಿ ಸಡಿಲಿಕೆ ಮಾಡಿ ಲೈಸೆನ್ಸ್ ಹೊಂದಿದ ಎಲ್ಲಾ ಅಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಾವು ಹೊಂದಿದ ಟೂರಿಸ್ಟ್ ವಿವರಗಳ ಮೇರೆಗೆ ಪರಿಹಾರ ದೊರೆಯುವಂತೆ ಸರ್ಕಾರ ದ ಈ. ಯೊಜನೆ ಅರ್ಹರಿಗೆ ತಲುಪುವಂತಾಗಲಿ ಎಂದು ಹನೀಫ್ ಬಗ್ಗುಮೂಲೆ ಸರ್ಕಾರವನ್ನು ಆಗ್ರಹಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ