janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಯಿಂದ ರಂಝಾನ್ ಕಿಟ್ ವಿತರಣೆ

ಬಿ ಸಿ ರೋಡ್ : ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾದ್ಯಂತ ಒಂದು ಕೋಟಿ ರೂಪಾಯಿಯ ದಿನಸಿ ವಿತರಣಾ ಕಾರ್ಯ ಕ್ರಮದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಿತರಣಾ ಕಾರ್ಯ ಕ್ರಮ ಇಂದು ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಎಸ್ ಎಂ ರಷೀದ್ ಹಾಜಿಯವರ ಅಧ್ಯಕ್ಷ ಕತೆಯಲ್ಲಿ ನಡೆಯಿತು.


ಕಾರ್ಯ ಕ್ರಮ ಉದ್ಘಾಟಿಸಿ ಮಾತಾಡಿದ ರಾಜ್ಯ ವಕ್ಪ್ ಬೋರ್ಡ್ ಸದಸ್ಯ ಹಾಗೂ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯ ಧರ್ಶಿ ಮೌಲಾನ ಎನ್ ಕೆ ಎಂ ಶಾಫಿ ಸ ಅದಿ ಕೋವಿಡ್ 19 ನಿಂದ ಇಡೀ ಪ್ರಪಂಚವೇ ಕಂಗಾಲಾಗುತ್ತಿರುವಾಗ ಬಡವರು ಮಾತ್ರವಲ್ಲದೆ ಮಧ್ಯಮ ವರ್ಗವು ಆರ್ಥಿಕ ಸಂಕಷ್ಟಕ್ಕೀಡಾಗಿದೆ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳೊಂದಿಗೆ ರಾಜ್ಯಾದ್ಯಂತ ಕೆ ಎಂ ಜೆ ಸಹಾಯ ಹಸ್ತ ನೀಡಿದೆ.ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ,ಕೊಪ್ಪಳ,ದಾವಣಗೆರೆ,ಹಾವೇರಿ,ತುಮಕೂರು, ಹಾಗೂ ಬಳ್ಳಾರಿ ಜಿಲ್ಲಾ ಸಮಿತಿಯು ಆಯಾಯ ಜಿಲ್ಲೆಯ ಪ್ರತಿ ತಾಲ್ಲೂಕು ಗಳಲ್ಲಿ ಅಗತ್ಯ ಕುಟುಂಬ ಗಳಿಗೆ ನೆರವು ನೀಡಿದೆ.ಈಗಾಗಲೇ ಒಂದು ಕೋಟಿ ರೂಪಾಯಿ ಯ ದಿನಸಿ ನೀಡಲಾಗಿದೆ.
ಉಳಿದಿರುವ ಎಂಟು ಜಿಲ್ಲೆಯ ಜಿಲ್ಲಾ ಸಮಿತಿ ಗಳ ದಿನಸಿ ಕಿಟ್ ಗಳು ಈ ವಾರದಲ್ಲಿ ವಿತರಣೆ ನಡೆಯಲಿದೆ.

ಎಂದು ತಿಳಿಸಿದರು.ರಾಜ್ಯ ಉಪಾಧ್ಯಕ್ಷ ಮೌಲಾನ ಎಚ್ ಐ ಅಬೂಸುಫ್ಯಾನ್ ಮದನಿ ,ಎಸ್ ವೈ ಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ ಎಮ್ ಎಸ್ ಎಮ್ ಝೈನಿ ಕಾಮಿಲ್ ,ಎಸ್ ಎಸ್ ಎಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಮುಂತಾದವರು ಮಾತಾಡಿದರು.ರಾಜಿವ್ ಗಾಂದಿ ಸಿಂಡಿಕೇಟ್ ಸದಸ್ಯ ಡಾ. ಯು ಟಿ ಇಪ್ತಿಕಾರ್ ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಸಮಿತಿಗೆ ಕಿಟ್ ಹಸ್ತಾಂತರ ಕ್ಕೆ ಚಾಲನೆ ನೀಡಿದರು.ಇದೇ ವೇಳೆಯಲ್ಲಿ ಸಾರ್ವಜನಿಕ ರ ಅನುಕೂಲ ಕ್ಕಾಗಿ ಮಂಗಳೂರಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಮಿತಿ ಯಿಂದ ಒಂದು ಆಂಬ್ಯುಲೆನ್ಸ್ನ ಘೋಷಣೆ ನಡೆಯಿತು.ಈ ಸಂದರ್ಭದಲ್ಲಿ ತಾಲ್ಲೂಕು ಸಮಿತಿ ಅಧ್ಯಕ್ಷ ರುಗಳಾದ ಎಸ್ ಎಂ ತಂಞಲ್ ಬೆಳ್ತಂಗಡಿ, ಆರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಪುತ್ತೂರು, ಮೀರಾನ್ ಸಾಹೆಬ್ ಕಡಬ,ತೌಪೀಕ್ ರಫೀಕ್ ಪಾಣೆಮಂಗಳೂರು, ಮುಹಮ್ಮದ್ ಕುಞ ಗೂನಢ್ಕ ಸುಳ್ಯ, ರಾಜ್ಯ ನಾಯಕ ರುಗಳಾದ ಅಬ್ದುಲ್ ಹಮೀದ್ ಬಜ್ಪೆ,ಸಾದಿಖ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಕಿನಾರ ಮಂಗಳೂರು,ತಾಲೂಕು ನಾಯಕರಾದ ಅನ್ವರ್ ಹುಸೈನ್ ಗೂಡಿನಬಳಿ, ಇಸ್ಮಾಹಿಲ್ ಹಾಜಿ ಬೈತಡ್ಕ, ಮುಸ್ತಫ ಜನತಾ, ಅಬ್ದುರ್ರಹ್ಮಾನ್ ಮೊಗರ್ಪಣೆ, ಹಮೀದ್ ಬೀಜಕೊಚ್ಚಿ ಉಪಸ್ಥಿತಿತರಿದ್ದು ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಬಿ ಎಂ ಮಮ್ತಾಜ್‌ ಅಲಿ ಸ್ವಾಗತಿಸಿದರು.

error: Content is protected !! Not allowed copy content from janadhvani.com