ಪುತ್ತೂರು : ಪುತ್ತೂರು ಸಮೀಪದ ಬನ್ನೂರು ಕರ್ಮಲ ನಿವಾಸಿ ಹನೀಫ್ ಎಂಬವರ ಪುತ್ರ ಮುಹಮ್ಮದ್ ಹುಕ್ಕಾಶ್, ಹನ್ನೆರಡರ ಹರೆಯದ ಬಾಲಕ ಪ್ರಾಮಾಣಿಕತೆ ಮೆರೆದು ಸುದ್ದಿಯಾಗಿದ್ದಾನೆ.
ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಇವರ ಕಛೇರಿಯ ವಾರ್ ರೂಮ್ ಮೂಲಕ ಪುತ್ತೂರು ಬಂಟರ ಸಂಘದ ವತಿಯಿಂದ ಕಿಟ್ ವಿತರಿಸಲಾಗಿತ್ತು.
ಉಕ್ಕಾಶ್ ಮನೆಗೆ ನೀಡಲಾಗಿದ್ದ ಆಹಾರ ಸಾಮಾಗ್ರಿಗಳ ಕಿಟ್‌ನಲ್ಲಿ ಪ್ಯಾಕ್ ಮಾಡಿದ ವ್ಯಕ್ತಿಯ ಚಿನ್ನದುಂಗುರ ಉದುರಿ ಬಿದ್ದಿತ್ತು. ತನಗೆ ಕಿಟ್‌ನಲ್ಲಿ ಬಿದ್ದು ಸಿಕ್ಕಿದ ಚಿನ್ನದುಂಗುರವನ್ನು ಉಕ್ಕಾಶ್ ಸ್ಥಳೀಯ ನಗರ ಸಭಾ ಸದಸ್ಯೆ ಪ್ರೇಮಲತಾ ಅವರಿಗೆ ಹಿಂದುರಿಗಿಸಿದ್ದ. ಉಂಗುರವು ಕಿಟ್ ಪ್ಯಾಕಿಂಗ್ ಮಾಡಿದ್ದ ರಾಮಚಂದ್ರ ಘಾಟೆ ಎಂಬವರಿಗೆ ಸೇರಿತ್ತು.
ಬಾಲಕ ಹುಕ್ಕಾಶ್‌ನ ಪ್ರಾಮಾಣಿಕತೆ ಮನಗಂಡ ಶಾಸಕರು ಬಾಲಕನ ಮನೆಗೆ ತೆರಳಿ ಶಾಲು ಹೊದಿಸಿ, ಹೂಗುಚ್ಛ ನೀಡಿ, ಮತ್ತೊಂದು ಕಿಟ್ ನೀಡಿ ಸನ್ಮಾನಿಸಿದ್ದಾರೆ.
ಶಾಸಕರ ಈ ನಡೆ ಎಲ್ಲೆಡೆ ಪ್ರಶಂಸನೀಯವಾಗಿದ್ದು, ಬಾಲಕನ ಪ್ರಾಮಾಣಿಕತೆಗೆ ಎಲ್ಲರೂ ಬೇಷ್ ಅಂದಿದ್ದಾರೆ.ಮುಹಮ್ಮದ್ ಹುಕಾಶ್ ಬೆಳಂದೂರಿನ ಈಡನ್ ಗ್ಲೋಬಲ್ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್