ಅಬುಧಾಬಿ: ಕೋವಿಡ್ ತಪಾಸಣೆ ಸೌಲಭ್ಯವು ಇನ್ನು ಮುಂದೆ ಅಬುಧಾಬಿಯಲ್ಲಿ ಕೇವಲ ಐದು ನಿಮಿಷಗಳಲ್ಲಿ ಲಭ್ಯವಾಗಲಿದೆ. ಇಲ್ಲಿ ಗರಿಷ್ಠ ಸಂಖ್ಯೆಯ ಪರೀಕ್ಷೆಗಳಿಗೆ ಅತ್ಯಾಧುನಿಕ ಪರೀಕ್ಷಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಅಬುಧಾಬಿ ಝಾಯಿದ್ ಸ್ಪೋರ್ಟ್ಸ್ ಸಿಟಿ ಡ್ರೈವ್-ಥ್ರೂ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಅಲ್ಲಿ ಕೋವಿಡ್ ಪರಿಶೀಲನೆಯನ್ನು ಸುಲಭವಾಗಿ ನಡೆಸಬಹುದಾಗಿದೆ. ಅಬುಧಾಬಿ ಯುವರಾಜ ಮತ್ತು ಯುಎಇ ಉಪ ಕಮಾಂಡರ್-ಇನ್-ಚೀಫ್ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನೆಯನ್ನು ವಾಹನದಲ್ಲಿ ಸ್ವಯಂ ತಪಾಸಣೆಗೊಳಪಡುವ ಮೂಲಕ ನಡೆಸಲಾಯಿತು.
ವಾಹನ ಚಲಾಯಿಸಿ ಬರುವವರ ಬಳಿಗೆ ತರಳುವ ಸೇವಕರು ಶ್ರವ ಸಂಗ್ರಹಿಸುವರು.
ಅಬುಧಾಬಿಯ ಆರೋಗ್ಯ ಇಲಾಖೆ ‘ಸೇಹಾ’ದ ಸಹಾಯದಿಂದ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಪರೀಕ್ಷೆಗಾಗಿ ಡ್ರೈವ್-ಥ್ರೂ ವ್ಯವಸ್ಥೆಯನ್ನು ನೀಡುವ ವಿಶ್ವದ ಐದನೇ ರಾಷ್ಟ್ರವೂ ಯುಎಇ ಆಗಿದೆ.

ಮೊದಲ ಹಂತವೆಂದರೆ ಝಾಯಿದ್ ಸ್ಪೋರ್ಟ್ಸ್ ಸಿಟಿಯಲ್ಲಿ ವಿಶೇಷವಾಗಿ ಸುಸಜ್ಜಿತಗೊಳಿಸಿದ ಟೆಂಟ್‌ಗೆ ಬರುವ ಜನರ ಕೈಗಳನ್ನು ಸ್ಯಾನಿಟೈಝರ್ ನೀಡಿ ಸ್ವಚ್ಛ ಗೊಳಿಸುವುದು. ಎಮಿರೇಟ್ಸ್ ಐಡಿಯನ್ನು ಸ್ಕ್ಯಾನ್ ಮಾಡಿದ ನಂತರ, ಅಧಿಕಾರಿ ನಿಗದಿಪಡಿಸಿದ ಮುಂದಿನ ಹಂತಕ್ಕೆ ವಾಹನ ಚಲಾಯಿಸಿ ತೆರಳಬೇಕು.

ಶ್ರವವನ್ನು ನೀಡಿದ ನಂತರ ದೇಹದ ಉಷ್ಣತೆಯನ್ನು ಪರಿಶೀಲಿಸಲಾಗುತ್ತದೆ. ಇಲ್ಲಿಗೆ ಪರೀಕ್ಷಾ ಹಂತವನ್ನು ಮುಗಿಸಿ, ಹಿಂತಿರುಗಬಹುದು. ಆರು ಗಂಟೆಗಳ ನಂತರ ಎಸ್‌ಎಂಎಸ್ ಮತ್ತು ಸೇಹಾ ಆ್ಯಪ್ ಮೂಲಕ ಫಲಿತಾಂಶಗಳು ಲಭ್ಯವಿರುತ್ತವೆ. ಕೇಂದ್ರದ ಸೇವೆಗಳು ನಿವಾಸಿಗಳಿಗೆ ಮಾತ್ರವಲ್ಲದೆ ವಿದೇಶಿಯರಿಗೂ ಪ್ರಯೋಜನಕಾರಿಯಾಗಲಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ