janadhvani

Kannada Online News Paper

ಜಿದ್ದಾದ ಏಳು ವಸತಿ ಪ್ರದೇಶಗಳಿಗೆ ಪ್ರವೇಶ ನಿಷೇಧ- 24 ಗಂಟೆಗಳ ಕರ್ಫ್ಯೂ

ರಿಯಾದ್: ಸೌದಿ ಅರೇಬಿಯಾದಲ್ಲಿ ಇಂದು 140 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2179 ಕ್ಕೆ ಏರಿದೆ. ಇಂದು 4 ಮಂದಿ ಕೋವಿಡ್-19 ನಲ್ಲಿ ಮೃತಪಟ್ಟಿದ್ದು, ಮರಣ ಸಂಖ್ಯೆ 29ಕ್ಕೆ ಏರಿದೆ. 69 ಮಂದಿ ಇಂದು ಗುಣಮುಖರಾಗಿದ್ದು, ಇದರೊಂದಿಗೆ 420 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್-19 ಹರಡುವುದನ್ನು ತಡೆಯುವ ಅಂಗವಾಗಿ ಜಿದ್ದಾದ ಏಳು ವಸತಿ ಪ್ರದೇಶಗಳಿಗೆ 24 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ.

ಜಿದ್ದಾ ಗವರ್ನರೇಟ್‌ನಲ್ಲಿ ಕಿಲೋ 14 ಜನೂಬ್,ಕಿಲೋ 14 ಶಿಮಾಲ್, ಅಲ್-ಮಹಜರ್, ಗುಲೇಲ್, ಅಲ್-ಖುರಾಯತ್, ಕಿಲೋ 13 ಮತ್ತು ಪೆಟ್ರೋಮಿನ್ ಪ್ರದೇಶಗಳನ್ನು ಸಂಪೂರ್ಣವಾಗಿ ಐಸೊಲೇಟ್ ಮಾಡಲಾಗಿದೆ.

ಇಲ್ಲಿನ ಜನರು ಹೊರಗೆ ಹೋಗುವುದು ಅಥವಾ ಹೊರಗಿನವರು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ಇಂದು ಮಧ್ಯಾಹ್ನ 3 ರಿಂದ ಆದೇಶ ಜಾರಿಗೊಂಡಿದೆ.ಈ ಪ್ರದೇಶದ ಜನರು ಆಹಾರ ಮತ್ತು ಔಷಧಿಗಾಗಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಅವಕಾಶ ನೀಡಲಾಗುವುದು. ಅಗತ್ಯ ವಸ್ತುಗಳನ್ನು ಮಾತ್ರ ಈ ಪ್ರದೇಶದ ಅಂಗಡಿಗಳಿಂದ ಖರೀದಿಸಲು ಅನುಮತಿಸಲಾಗಿದೆ.

ಭದ್ರತಾ ಇಲಾಖೆ ಕರ್ಫ್ಯೂ ವಿಧಿಸಿದ ಪ್ರದೇಶ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

ಈ ಪ್ರದೇಶದಲ್ಲಿರುವವರು ಕಣ್ಗಾವಲಿನಲ್ಲಿರುತ್ತಾರೆ, ಕಾನೂನಿನ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತದೆ.
error: Content is protected !! Not allowed copy content from janadhvani.com