janadhvani

Kannada Online News Paper

ಶುಭ ಸುದ್ದಿ: ಲೆವಿ ವಿನಾಯಿತಿ,ಇಖಾಮಾ ನವೀಕರಣ ಜಾರಿ

ರಿಯಾದ್: ಕೋವಿಡ್-19 ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ವಲಸಿಗರಿಗೆ ಘೋಷಿಸಿದ ಲೆವಿ ವಿನಾಯಿತಿಯು ಜಾರಿಗೆ ಬಂದಿದೆ. ಕಳೆದ ರಾತ್ರಿಯಿಂದ, ದೇಶದ ವಲಸಿಗರು ಮತ್ತು ಅವಲಂಬಿತರಿಗೆ ಇಖಾಮಾ ಅವಧಿಯನ್ನು ಉಚಿತವಾಗಿ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.

ಜೂನ್ 30 ರೊಳಗೆ ಮುಕ್ತಾಯ ಗೊಳ್ಳುವವರಿಗೆ ಜವಾಝಾತ್ ಇಲಾಖೆಯು ಸ್ವಯಂಚಾಲಿತವಾಗಿ ಇಖಾಮಾ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಿದೆ. ಹೆಚ್ಚಿನವರು ಈಗಾಗಲೇ ಈ ಬಗ್ಗೆ SMS ಸ್ವೀಕರಿಸಿದ್ದಾರೆ. ರಜಾದಲ್ಲಿ ಊರಿಗೆ ಹೋದವರ ಇಖಾಮಾ ಅವಧಿಯನ್ನೂ ನವೀಕರಣಗೊಳಿಸಲಾಗಿದೆ.

ಪ್ರಸಕ್ತ ಎಕ್ಸಿಟ್,ಎಂಟ್ರಿ ಪಡೆದವರಿಗೂ ಇಖಾಮಾದಲ್ಲಿ ಅವಧಿಯನ್ನು ನೀಡಲಾಗಿದೆ. ಅಬ್ಶೀರ್ ಮೂಲಕ ಪರಿಶೀಲಿಸಿ, ಇಖಾಮಾ ನವೀಕರಿಸಿದ ಅವಧಿಯನ್ನು ತಿಳಿದುಕೊಳ್ಳಬಹುದಾಗಿದೆ. ಈ ಅವಧಿಯ ನಂತರ ಮಾತ್ರ ಲೆವಿ ಪಾವತಿಸಿದರೆ ಸಾಕು. ಈ ರಿಯಾಯಿತಿಯು ಅವಲಂಬಿತರಿಗೆ ದೊಡ್ಡ ಮಟ್ಟದ ಲಾಭವೆಂದು ವಲಸಿಗರು ಪರಿಗಣಿಸಿದ್ದಾರೆ. ಆದಾಗ್ಯೂ, ಅವಲಂಬಿತ ವೀಸಾದವರ ಲೆವಿಯನ್ನು ಮೂರು ತಿಂಗಳ ನಂತರ ಪಾವತಿಸಬೇಕು. ಅಂದರೆ, ಲೆವಿ ಪಾವತಿಸುವಾಗ, ಒಟ್ಟು 15 ತಿಂಗಳ ಲೆವಿಯನ್ನು ಪಾವತಿಸಬೇಕಾಗುತ್ತದೆ.

ಮಾರ್ಚ್ 18 ರಿಂದ ಜೂನ್ 30 ರ ಮಧ್ಯೆ ಇಖಾಮಾ ಮುಕ್ತಾಯಗೊಳ್ಳುವವರು ಉಚಿತ ಇಖಾಮಾ ನವೀಕರಣಕ್ಕೆ ಅರ್ಹರಾಗಿದ್ದಾರೆ. ಕೆಲವರು ಅಬ್ಶೀರ್‌ನಲ್ಲಿ ಲೆವಿಗೆ ಹಣ ಪಾವತಿಸಿದ್ದಾರೆ, ಆದರೆ ಅದನ್ನು ಅವರು ಕಳೆದುಕೊಂಡಿಲ್ಲ.ಪ್ರಸಕ್ತ, ಇಖಾಮಾ ಮೊತ್ತವನ್ನು ಪಾವತಿಸಿದವರಿಗೂ ಹೆಚ್ಚುವರಿ ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ.

ಈಗಾಗಲೇ ನಿರ್ಗಮನವನ್ನು ಪಡೆದವರು ಅವಧಿ ಮುಕ್ತಾಯಗೊಳ್ಳುವ ಮುಂಚಿತವಾಗಿ ರದ್ದುಗೊಳಿಸುವಂತೆ ಜವಾಝಾತ್ ನಿರ್ದೇಶನಾಲಯ ಸೂಚಿಸಿದೆ.ಇಲ್ಲದಿದ್ದಲ್ಲಿ ನಿರ್ಗಮನ ಅವಧಿಯ ನಂತರ ಸಾವಿರ ರಿಯಾಲ್ ದಂಡ ಪಾವತಿಸಬೇಕಾಗುತ್ತದೆ. ವಿಮಾನವನ್ನು ಪ್ರಾರಂಭಿಸುವ ವೇಳೆ ಅವರು ನಿರ್ಗಮನ ವೀಸಾವನ್ನು ಮತ್ತೆ ಪಡೆಯಬಹುದಾಗಿದೆ.

error: Content is protected !! Not allowed copy content from janadhvani.com