ರುಯಾದ್: ಕೊವಿಡ್-19 (ಕರೋನಾ) ರೋಗ ಭೀತಿಯ ಹಿನ್ನೆಲೆಯಲ್ಲಿ ಉಮ್ರಾ ಮತ್ತು ಮದೀನಾ ಝಿಯಾರತ್ ಅನ್ನು ತಾತ್ಕಾಲಿಕವಾಗಿ ತಡೆಯುವ ವಿಧಾನವು ಷರಿಯತ್ ಕಾನೂನಿನ ಅನುಸಾರವಾಗಿದೆ ಎಂದು ಮಕ್ಕಾದ ಹರಮ್‌ನಲ್ಲಿ ಕುತುಬಾ ಪ್ರವಚನ ಮತ್ತು ಜುಮುಅ ನಮಾಝಿಗೆ ನೇತೃತ್ವ ವಹಿಸಿದ್ದ ಇಮಾಮ್ ಶೈಖ್ ಅಬ್ದುಲ್ಲಾ ಅಲ್-ಜುಹಾನಿ ಹೇಳಿದ್ದಾರೆ.
ಜನರ ಪ್ರಾಣ ಉಳಿಸುವುದು ಶರಿಯತ್ ಕಾನೂನಿನ ಭಾಗವಾಗಿದೆ. ಆ ಆಧಾರದ ಮೇಲೆ, ನಿರ್ಬಂಧಗಳನ್ನು ಒಳಗೊಂಡಂತೆ ಕೆಲವು ಕಾರ್ಯವಿಧಾನಗಳನ್ನು ಹರಮ್‌ಗಳ ಮೇಲೆ ವಿಧಿಸಲಾಗಿದೆ. ಕೋವಿಡ್ 19 ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ, ಆರೋಗ್ಯ ನಿರ್ವಹಣೆಯೊಂದಿಗೆ ಸೃಷ್ಟಿಕರ್ತನಾದ ಅಲ್ಲಾಹನೊಡನೆ ಪ್ರಾರ್ಥಿಸಬೇಕು ಎಂದು ಇಮಾಮ್ ತನ್ನ ಪ್ರವಚನದಲ್ಲಿ ಹೇಳಿದರು.
ಮದೀನಾದ ಇಮಾಮ್ ಶೈಖ್ ಡಾ. ಸಲಾಹುಲ್ ಬುದೈರ್ ತಮ್ಮ ಖುತ್ಬಾ ಭಾಷಣದಲ್ಲಿ, ಅಲ್ಲಾಹನ ಪರೀಕ್ಷಣೆಯ ಭಾಗವಾಗಿದೆ ಕೋವಿಡ್ -19 ಎನ್ನುವ ವೈರಸ್. ಇಂತಹ ಕೆಲವು ತೀರ್ಮಾನಗಳನ್ನು ಅಲ್ಲಾಹನು ಕೈಗೊಳ್ಳುತ್ತಾನೆ. ಎಲ್ಲಾ ಮನುಷ್ಯರು ಅಲ್ಲಾಹನ ಕಡೆಗೆ ಹಿಂದಿರುಗಿ ಅಲ್ಲಾಹನ ಭಯದಿಂದ ಬದುಕಬೇಕು. ವೈರಸ್ ವಿರುದ್ಧ ಪ್ರತಿರೋಧ ಒಡ್ಡುವ ಸಲುವಾಗಿ, ಉಮ್ರಾ ಮತ್ತು ಮದೀನಾ ಭೇಟಿಗಳನ್ನು ಸರಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ