janadhvani

Kannada Online News Paper

ಸದಸ್ಯತ್ವ ಅಭಿಯಾನಕ್ಕೆ ಜಿಲ್ಲಾ ಮಟ್ಟದಲ್ಲಿ ಚಾಲನೆ

ಉಡುಪಿ: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನವನ್ನು ರಾಜ್ಯ ಸಮಿತಿ ಸದಸ್ಯರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ರವರು ಜಿಲ್ಲಾ ಕಾರ್ಯಾಧ್ಯಕ್ಷರಾದ ಹಾಜಿ ಎಮ್ ಎಸ್ ರಝ್ಝಾಕ್ ರವರಿಗೆ ನೀಡುವ ಮೂಲಕ ಚಾಲನೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷರು ಗಳಾದ ಶೇಖ್ ಮುಹಮ್ಮದ್ ನಯೀಮ್,ಬಿ.ಎಸ್.ಎಫ್ ರಫೀಕ್, ಸರ್ದಾರ್ ಗುಲ್ವಾಡಿ, ಮುಹಮ್ಮದ್ ಗೌಸ್ ನಾಯರಾದ ಸೆಯ್ಯಿದ್ ಫರೀದ್, ಅಡ್ವಕೆಟ್ ಇಲ್ಯಾಸ್, ನಾಸಿರ್ ಇಂಜಿನಿಯರ್ ಹಾಗೂ ಮತ್ತಿತರ ಪ್ರಮುಖರು ಹಾಜರಿದ್ದರು ಜಿಲ್ಲಾ ಕಾರ್ಯದರ್ಶಿಗಳಾದ ವೈ ಬಿ ಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು.

ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು ಸುಬ್ಹಾನ್ ಅಹ್ಮದ್ ಹೊನ್ನಾಳ ವಂದಿಸಿದರು.