ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ಇದರ ವತಿಯಿಂದ 3ನೇ ಆವೃತ್ತಿಯ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ – 2019 ವು ನಿಝ್ವ ದ ಹೈತುರಾತ್ ನ ಅಲ್ ಬುಸ್ತಾನ್ ಫಾರ್ಮ್ ಹೌಸ್ ನಲ್ಲಿ ಶುಕ್ರವಾರದಂದು ಬಹಳ ಯಶಸ್ವಿಯಾಗಿ ನಡೆಯಿತು.ಏಳು ಝೋನ್ ಗಳನ್ನು (ಮಸ್ಕತ್,ಬೌಶರ್,ಸೊಹಾರ್, ನಿಝ್ವ, ಸೀಬ್,ಸಲಾಲ,ಬುರೈಮಿ) ಒಳಗೊಂಡ ಪ್ರತಿಭೋತ್ಸವದಲ್ಲಿ ಕೆಸಿಎಫ್ಸೊಹಾರ್ ಝೋನ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಕೆಸಿಎಫ್ ಸೀಬ್ ಝೋನ್, ತೃತೀಯ ಸ್ಥಾನವನ್ನು ಕೆಸಿಎಫ್ ಬೌಶರ್ ಝೋನ್ ಪಡೆದು ಕೊಂಡರು. ವ್ಯಯಕ್ತಿಕ ಚಾಂಪಿಯನ್ ಆಗಿ ಕೆಸಿಎಫ್ ಸೊಹಾರ್ ಝೋನ್ ನ ಆರಿಫ್ ಮದಕ ಗಿಟ್ಟಿಸಿಕೊಂಡರು.
ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜನಾಬ್ ಅಯ್ಯೂಬ್ ಕೊಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಉದ್ಘಾಟನೆಯನ್ನು ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಬಹು ಉಮರ್ ಸಖಾಫಿ ಮಿತ್ತೂರ್, ಪ್ರಾಸ್ತಾವಿಕ ಭಾಷಣವನ್ನು ಕೆಸಿಎಫ್ ಒಮಾನ್ ಇದರ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಇವರು ನೆರವೇರಿಸಿದರು.ಮುಖ್ಯ ಅಥಿತಿಯಾಗಿ ಸಯ್ಯಿದ್ ಮುಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿ ನಿಝ್ವ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ಹಾಗೂ ಸಂಘಟನಾ ಅಧ್ಯಕ್ಷರಾದಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಕೊಡಗು , ಕೋಶಾಧಿಕಾರಿ ಆರಿಫ್ ಕೊಡಿ , ಶಿಕ್ಷಣ ವಿಭಾಗದ ಅಧ್ಯಕ್ಷರಾದ ಉಬೈದುಲ್ಲಾ ಸಖಾಫಿ, ಹಂಝ ಹಾಜಿ ಕನ್ನಂಗಾರ್ ಅಧ್ಯಕ್ಷರು ಇಹ್ಸಾನ್ ಕರ್ನಾಟಕ, ಇಬ್ರಾಹಿಮ್ ಅತ್ರಾಡಿ ಅಧ್ಯಕ್ಷರು ಸಾಂತ್ವನ ವಿಭಾಗ, ಶಮೀರ್ ಉಸ್ತಾದ್ ಹೂಡೆ ಅಧ್ಯಕ್ಷರು ಪಬ್ಲಿಷಿಂಗ್ ವಿಭಾಗ, ಖಾಸಿಂ ಹಾಜಿ ಅಧ್ಯಕ್ಷರು ಆಡಳಿತ ವಿಭಾಗ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಮತ್ತ ನಿಝ್ವ ಝೋನ್ ಅಧ್ಯಕ್ಷರಾದ ಬಾಷ ತೀರ್ಥಹಳ್ಳಿ, ಪ್ರತಿಭೋತ್ಸವ ಸ್ವಾಗತ ಸಮಿತಿ ಚಯರ್ಮೆನ್ ಅಬ್ಬಾಸ್ ಮರಕಡ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ವಿಭಾಗದ ಕಾರ್ಯದರ್ಶಿಗಳಾದ ಸಂಶದ್ದೀನ್ ಪಾಲ್ತಡ್ಕ, ಸಿದ್ದೀಕ್ ಮಾಂಬ್ಲಿ ಸುಳ್ಯ, ಅಶ್ರಫ್ ಭಾರತ್ ಸುಳ್ಯ, ಇಕ್ಬಾಲ್ ಎರ್ಮಾಲ್, ಇರ್ಫಾನ್ ಕೂರ್ನಡ್ಕ, ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರು ಗಳು ಮತ್ತು ವಿವಿಧ ಝೋನ್ ನಾಯಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಫ್ಯಾಮಿಲಿ ಮೀಟ್ ಮತ್ತು ಮಹಿಳೆಯರ ಮತ್ತು ಮಕ್ಕಳ ವಿಭಾಗದ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಿತು.ಸ್ವಾಗತ ಸಮಿತಿ ಕನ್ವೀನರ್ ಝುಬೈರ್ ಸ ಅದಿ ಪಾಟ್ರಕೋಡಿ ಸ್ವಾಗತಿಸಿ ,ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು.ಪ್ರಸ್ತುತ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಕೆಸಿಎಫ್ ನಿಝ್ವ ಝೋನ್ ಸಮಿತಿಯರು ವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ