janadhvani

Kannada Online News Paper

SSF ಬೆಳ್ತಂಗಡಿ ಡಿವಿಷನ್ ವಾರ್ಷಿಕ‌ ಮಹಾಸಭೆ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಬೆಳ್ತಂಗಡಿ ಡಿವಿಷನ್ ಇದರ ಮಹಾಸಭೆಯು ಫೆಬ್ರವರಿ 27 ಗುರುವಾರ ಮಗ್ರಿಬ್ ನಮಾಝಿನ ಬಳಿಕ ವೇಣೂರಿನ, ಕುಂಡದಬೆಟ್ಟು ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಡಿವಿಷನ್ ಅಧ್ಯಕ್ಷರಾದ ನಝೀರ್ ಮದನಿ ಅಧ್ಯಕ್ಷತೆಯನ್ನು ವಹಿಸಲಿರುವರು.
SSF ದ.ಕ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್‌ಳರಿ ಸಭೆಯನ್ನು ಉಧ್ಘಾಟಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ SSF ಬೆಳ್ತಂಗಡಿ ಡಿವಿಷನ್ ಉಸ್ತುವಾರಿ ಇಬ್ರಾಹೀಂ ಸ‌ಅದಿ ಕಳಂಜಿಬೈಲು SSF ದ.ಕ ಈಸ್ಟ್ ಝೋನ್ ಕೋಶಾಧಿಕಾರಿ ಮುಹಮ್ಮದ್ ರಫೀಕ್ ಅಹ್ಸನಿ ಬೋವು,ಸದಸ್ಯರಾದ ಝುಬೈರ್ ಸಖಾಫಿ ಗಟ್ಟಮನೆ,ಅಬ್ದುರ್ರಹ್ಮಾನ್ ಪದ್ಮುಂಜ,ಮಸ್‌ಊದ್ ಸ‌ಅದಿ ಪದ್ಮುಂಜ ಭಾಗವಹಿಸಲಿರುವರು ಎಂದು SSF ಬೆಳ್ತಂಗಡಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಕಟನೆ : ಎಂ.ಎಂ.ಉಜಿರೆ.