janadhvani

Kannada Online News Paper

ಕಾರ್ಕಳ ತಾಲೂಕು ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ ದಿನಾಂಕ. 25/02/2020 ರಂದು ಅಬೂಸುಫ್ಯಾನ್ ಮದನಿಯವರ ಅಧ್ಯಕ್ಷತೆಯಲ್ಲಿ ಬಂಗ್ಲೆಗುಡ್ಡೆ ತ್ವೈಬಾ ಗಾರ್ಡನ್ ನಲ್ಲಿ ನಡೆಯಿತು.

ಅಧ್ಯಕ್ಷರಾಗಿ ಶೇಖ್ ನಾಸಿರ್ ಇಂಜಿನಿಯರ್, ಉಪಾಧ್ಯಕ್ಷರಾಗಿ ಶರೀಪ್ ಮದನಿ,
ಅಬ್ದುಲ್ ಲತೀಫ್ ಸಾಣೂರು, ಮೊಯ್ದೀನ್
ಪ್ರ.ಕಾರ್ಯದರ್ಶಿ ಯಾಗಿ ಸಯ್ಯದ್ ಇಸ್ಮಾಯಿಲ್ ಮಿಯ್ಯಾರ್,ಜೊತೆ ಕಾರ್ಯದರ್ಶಿಯಾಗಿ ಇಬ್ರಾಹಿಂ ಹುಮೈದಿ, ಸುಲೈಮಾನ್ ಬಜಗೋಳಿ, ಹಾಗೂ ಕೋಶಾದಿಕಾರಿಯಾಗಿ ಅಬ್ದುರ್ರಹ್ಮಾನ್ ಐಡಿಯಲ್ ಹಾಗೂ ಐದು ಮಂದಿಯ ಕನ್ವೀನರ್ ಸಹಿತ 13 ಮಂದಿಯ ಸಮಿತಿಯನ್ನು ಆರಿಸಲಾಯ್ತು.
ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಹಮೀದ್ ಬಜ್ಪೆ ಉದ್ಘಾಟಿಸಿ, ಸವಿವರ ಮಾಹಿತಿ ನೀಡಿದರು.

ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಡುಯ ಜಿಲ್ಲಾ ಉಪಾಧ್ಯಕ್ಷ ಗೌಸ್ ಮಿಯ್ಯಾರ್, ಎಸ್‌.ಎಮ್.ಎ ಕಾರ್ಕಳ ರೀಜನಲ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಐಡಿಯಲ್, ಕಾರ್ಯದರ್ಶಿ ನೌಫಲ್ ರಿಯಾಝ್ ಅಹ್ಸನಿ, ಎಸ್.ಎಸ್.ಎಪ್ ರಾಜ್ಯ ಸದಸ್ಯ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಎನ್.ರಹೀಂ ಹೊಸ್ಮಾರ್ ಉಪಸ್ಥಿತರಿದ್ದರು.
ಕೊನೆಯಲ್ಲಿ ನೂತನ ಕಾರ್ಯದರ್ಶಿ ವಂದಿಸಿದರು.

error: Content is protected !!
%d bloggers like this: