ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ; ಅಲ್ ಮುದಾವಲ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿಯ ವಾರ್ಷಿಕ ಕೌನ್ಸಿಲ್ ಅಲ್ ಮುದಾವಲ 2, ಫೆಬ್ರವರಿ 9ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಫೈಝಲ್ ಝುಹ್ರಿ ಕಲ್ಲುಗುಂಡಿ ಉದ್ಘಾಟಿಸಿದರು. ಡಿವಿಷನ್ ಎಸ್ಸೆಸ್ಸೆಫ್ ಅಧ್ಯಕ್ಷರಾದ ಜಿ.ಕೆ ಇಬ್ರಾಹೀಂ ಅಂಜದಿ ದುಆ ನೆರೆವೇರಿಸಿದರು.

ಕೆ.ಸಿ.ಎಫ್ ಅಬುದಾಭಿ ಸದಸ್ಯ ಕಬೀರ್ ಜಟ್ಟಿಪಳ್ಳ, ಎಸ್.ವೈ.ಎಸ್ ದ.ಕ ಜಿಲ್ಲಾ ಸದಸ್ಯ ಸಿದ್ದೀಕ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕೋಶಾಧಿಕಾರಿ ಹಸೈನಾರ್ ನೆಕ್ಕಿಲ ಮುಖ್ಯ ಅತಿಥಿಗಳಾಗಿದ್ದರು. ಸೆಕ್ಟರ್ ಸಮಿತಿ ಹಾಗೂ ಅಧೀನದ ಹತ್ತು ಶಾಖೆಗಳಲ್ಲಿ ವರುಷವೊಂದರಲ್ಲಿ 25 ಲಕ್ಷ ರುಪಾಯಿಗಳ ಸೇವಾ ಕಾರ್ಯಚಟುವಟಿಕೆ ಹಾಗೂ ಕಾರ್ಯಾಚರಣೆಗಳು ನಡೆಸಲಾಗಿದೆ.
ಸಾಂಘಿಕ ಅವಧಿಯ ಒಂದು ವರುಷದ ಕಾರ್ಯಸಾಧನೆಗಳ ವಿವರ ಮತ್ತು ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ವೀಕ್ಷಕರಾಗಿದ್ದರು.
ನೂತನ ಸಮಿತಿ : ಸ್ವಬಾಹ್ ಹಿಮಮಿ (ಅಧ್ಯಕ್ಷ) ಸಿದ್ದೀಖ್ ಎಲಿಮಲೆ (ಪ್ರ. ಕಾರ್ಯದರ್ಶಿ) ಅಝೀಝ್ ಮಾಸ್ಟರ್ ಏಣಾವರ (ಕೋಶಾಧಿಕಾರಿ) ಶಾಕಿರ್ ಮೊಗರ್ಪಣೆ (ಕ್ಯಾಂಪಸ್ ಕಾರ್ಯದರ್ಶಿ) ಸಿದ್ದೀಖ್ ಹಿಮಮಿ, ಹಾರಿಸ್ ಗೂನಡ್ಕ (ಉಪಾಧ್ಯಕ್ಷರು) ಸಿದ್ದೀಖ್ ಬಿ.ಎ, ಶರೀಫ್ ಮೊಗರ್ಪಣೆ (ಕಾರ್ಯದರ್ಶಿಗಳು) ನಾಸಿರ್ ಎಲಿಮಲೆ, ಶಾಕಿರ್ ಎಲಿಮಲೆ, ಸ್ವಾದಿಖ್ ಪಿ.ಜಿ, ಬಶೀರ್ ಕಲ್ಲುಮುಟ್ಲು, ಅಬ್ದುಲ್ ರಹ್ಮಾನ್ ಮೊಗರ್ಪಣೆ, ಅಝ್ಹರ್ ಏಣಾವರ, ಕಾಶಿಂ ಗೂನಡ್ಕ, ಅಬೂ ಸ್ವಾಲಿಹ್ ಗುತ್ತಿಗಾರು, ರಹೀಂ ಪೈಂಬಚ್ಚಾಲ್ (ಸದಸ್ಯರು)
ಸಿದ್ದೀಖ್ ಹಿಮಮಿ ಸ್ವಾಗತಿಸಿ ಸಿದ್ದೀಖ್ ಎಲಿಮಲೆ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ