ಕೆಮ್ಮಾರ (ಜನಧ್ವನಿ ವಾರ್ತೆ): ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ಕೆಮ್ಮಾರ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ SYS & SSF ಕೆಮ್ಮಾರ ಶಾಖೆ ವತಿಯಿಂದ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ತಾಜುಲ್ ಉಲಮಾ, ಶಂಸುಲ್ ಉಲಮಾ, ನೂರುಲ್ ಉಲಮಾ ಹಾಗೂ ಅಗಲಿದ ಸುನ್ನೀ ಉಲಮಾ ನೇತಾರರ ಅನುಸ್ಮರಣಾ ಸಮ್ಮೇಳನವು 2020 ಜನವರಿ 19ರ ಅದಿತ್ಯವಾರ ಕೆಮ್ಮಾರ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ವಠಾರದಲ್ಲಿ ಮರ್ಹೂಮ್ ಖುತುಬಿ ಮುಹಮ್ಮದ್ ಮುಸ್ಲಿಯಾರ್ ನ.ಮ.) ವೇದಿಕೆಯಲ್ಲಿ ನಡೆಯಲಿರುವುದು.

ಕೆಮ್ಮಾರ ಜಮಾಅತ್ ಅಧ್ಯಕ್ಷರಾದ ಇಸ್ಮಾಯೀಲ್ ಕೆಮ್ಮಾರ ಅಧ್ಯಕ್ಷತೆ ವಹಿಸುವ ಸಮ್ಮೇಳನವನ್ನು ಸ್ಥಳೀಯ ಮುದರ್ರಿಸ್ ಹಾಫಿಳ್ ಮುಹಮ್ಮದ್ ಇಲ್ಯಾಸ್ ಸಖಾಫಿ ಮಾಡನ್ನೂರು ಉದ್ಘಾಟಿಸಲಿದ್ದಾರೆ.
ಕೆ.ಪಿ. ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್, ಸಬರಬೈಲು ದುವಾ ನೇತೃತ್ವ ವಹಿಸಲಿದ್ದು, ಕರ್ನಾಟಕ ಹಾಗೂ ಕೇರಳದಲ್ಲಿ ಖ್ಯಾತಿ ಗಳಿಸಿದ ಪ್ರಖ್ಯಾತ ಖುರ್‌ಆನ್ ಪ್ರಭಾಷಣಕಾರ ಹಾಫಿಳ್ ಮಸ್‌ಹೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಆತೂರು ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್, ಗಂಡಿಬಾಗಿಲು ಜುಮಾ ಮಸ್ಜಿದ್ ಖತೀಬರಾದ ಸಯ್ಯಿದ್ ಅನಸ್ ಅಲ್-ಹಾದೀ ತಂಙಳ್, SYS ಉಪ್ಪಿನಂಗಡಿ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು ಮತ್ತಿತರ ಊರ ಪರವೂರ ಅತಿಥಿಗಳ ಗಣ್ಯ ಉಪಸ್ಥಿತಿಯಲ್ಲಿ ನಡೆಯುವ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಸ್ವಾಗತ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್