ಸಿರಾಜುಲ್ ಹುದಾ ಪಾಡಿ: ಜ.25 ರಂದು ಆತ್ಮೀಯ ಮಜ್ಲಿಸ್

ವಿಟ್ಲ: ಸಿರಾಜುಲ್ ಹುದಾ ಎಜ್ಯುಕೇಷನಲ್ ಸೆಂಟರ್ ಪಾಡಿ,ಕರೋಪಾಡಿ(ಕನ್ಯಾನ) ಇದರ ಆಶ್ರಯದಲ್ಲಿ ಮರ್ಹೂಂ ಸಯ್ಯಿದ್ ಉಮರುಲ್ ಫಾರೂಖ್ ಅಲ್ ಬುಖಾರಿ ತಂಙಳ್(ಖ. ಸಿ) ಅವರ ಆಶೀರ್ವದೊಂದಿಗೆ ತಂಙಳರ ಸಾನಿಧ್ಯದಲ್ಲಿ ಪ್ರಾರಂಭಿಸಿ,ಪ್ರತೀ ತಿಂಗಳು ನಡೆಸಿಕೊಂಡು ಬರುತ್ತಿರುವ ಬದ್ರ್ ಮೌಲೀದ್, ಆತ್ಮೀಯ ಮಜ್ಲಿಸ್ ಈ ತಿಂಗಳ 25 ಶನಿವಾರ ನಡೆಯಲಿದೆ.

ಮರ್’ಹೂಂ ಪೊಸೋಟ್ ತಂಙಳ್ ವೇದಿಕೆ ಸಿರಾಜುಲ್ ಹುದಾ ಮದ್ರಸ ಪಾಡಿಯಲ್ಲಿ ಮಗ್ರಿಬ್ ನಮಾಜ್ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್ ಊರ್ ತಂಙಳ್ ತಲಕ್ಕಿ ದುಆ ನೇತೃತ್ವ ನೀಡುವರು.

ಬಹು ಅಬ್ದುಲ್ ಹಮೀದ್ ಸಖಾಫಿ ಪಾಡಿ
(ಚೇರ್’ಮೇನ್ ಸಿರಾಜುಲ್ ಹುದಾ ಪಾಡಿ) ಇವರ ಅಧ್ಯಕ್ಷತೆಯಲ್ಲಿ ಬಹು:ಮಹಮ್ಮದ್ ಹನೀಫ್ ಸಖಾಫಿ ಕಿನ್ಯಾ ಮುಖ್ಯ ಪ್ರಭಾಷಣ ನಡೆಸುವರು.

ಬಹು:ಅಲ್ಹಾಜ್ ಅಬ್ದುಲ್ ಹಕೀಂ ಮದನಿ ಕರೋಪಾಡಿ ಸಹಿತ ಇನ್ನಿತರ ಗಣ್ಯ ಉಲಮಾ ಪಂಡಿತರು ಭಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

✍🏻ರಫೀಕ್ ಮಂಡ್ಯೂರು

Leave a Reply

Your email address will not be published. Required fields are marked *

error: Content is protected !!