janadhvani

Kannada Online News Paper

ಗ್ರಾಮಚಾವಡಿ: ಪೌರತ್ವ ಸಂರಕ್ಷಣಾ ಸಮಾವೇಶ ಯಶಸ್ವಿಗೆ SSF ಆರ್ ಜಿ ನಗರ ಶಾಖೆ ಕರೆ

ಕೊಣಾಜೆ‌ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಮಾನ ಮನಸ್ಕರ ಸಭೆಯು ಜನವರಿ 10 (ನಾಳೆ) ಗ್ರಾಮಚಾವಡಿಯಲ್ಲಿ ಪೌರತ್ವ ಸಂರಕ್ಷಣಾ ಸಮಾವೇಶ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮಕ್ಕೆ ಧಾರ್ಮಿಕ , ಸಾಮಾಜಿಕ, ರಾಜಕೀಯ ನಾಯಕರು ಸಹಿತ ಹಲವಾರು ಚಿಂತಕರು, ಭಾಷಣಗಾರರು ಆಗಮಿಸಲಿದ್ದಾರೆ.

ಈ ಸಮಾವೇಶದಲ್ಲಿ SSF ಆರ್ ಜಿ ನಗರದ ಎಲ್ಲ ಕಾರ್ಯಕರ್ತರು ಸಮೇತ ಸರ್ವ ಪ್ರಜಾಪ್ರಭುತ್ವ ರಾಷ್ಟ್ರ ಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು SSF ಆರ್ ಜಿ ನಗರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.