janadhvani

Kannada Online News Paper

ಮಂಗಳೂರು: ಆಸ್ಪತ್ರೆಯ ICU ಗೆ ನುಗ್ಗಿ ಪೋಲೀಸ್ ದೌರ್ಜನ್ಯ

ಮಂಗಳೂರು: ನಗರದ ಬಂದರ್‌ನಲ್ಲಿ ನಡೆದ ಸಂಘರ್ಷದಲ್ಲಿ ಬಲಿಯಾದ ಇಬ್ಬರು ಯುವಕರು ಸೇರಿದಂತೆ ನಾಲ್ವರಿಗೆ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸಂಜೆ 6:40ಕ್ಕೆ ಆಸ್ಪತ್ರೆಯ ಐಸಿಯುನಲ್ಲಿ ನುಗ್ಗಿದ ಪೊಲೀಸರು ಹಲವರ ಮೇಲೆ ಲಾಠಿ ಬೀಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ. ಹಸನ್ ಮುಬಾರಕ್ ತಿಳಿಸಿದ್ದಾರೆ.

ಐಸಿಯುನಲ್ಲಿ ಬಹಳಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ದೌರ್ಜನ್ಯದಿಂದ ರೋಗಿಗಳು ಭಯಭೀತಿಗೊಂಡಿದ್ದರು. ಆಸ್ಪತ್ರೆಯಲ್ಲಿ ರೋಗಿಗಳ ಜತೆ ಬಂದವರ ಮೇಲೆ ಲಾಠಿಯಿಂದ ದಾಳಿ ಮಾಡಿದ್ದಾರೆ. ಇಂತಹ ಘಟನೆ ವೈದ್ಯ ವೃತ್ತಿಯಲ್ಲೇ ಮೊದಲು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.