ದಮ್ಮಾಮ್, ಡಿ.19 :ಭಾರತ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನ ನಾಗರಿಕರು ಸ್ವಯಂ ಪ್ರೇರಿತವಾಗಿ ನಡೆಸಿದ ಶಾಂತಿಯುತ ಪ್ರತಿಭಟನೆಯ ವಿರುದ್ಧ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ನಡೆಸಿ ಇಬ್ಬರು ಅಮಾಯಕರನ್ನು ವಧಿಸಿದ ಪೋಲೀಸ್ ಕ್ರಮವನ್ನು ಕೆ.ಸಿ.ಎಫ್ ಇಂಟರ್ ನ್ಯಾಷನಲ್ ಸಮಿತಿ(INC) ತೀವ್ರವಾಗಿ ಖಂಡಿಸಿದೆ.
ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ಅಮಾಯಕ ಯುವಕರ ಬಲಿಗೆ ಪೋಲೀಸ್ ಆಯುಕ್ತರೇ ನೇರ ಕಾರಣವೆನ್ನಲಾಗಿದ್ದು, ಮುಖ್ಯಮಂತ್ರಿಯವರ ಆದೇಶದ ಹೊರತಾಗಿಯೂ ಪ್ರತಿಭಟನಾ ನಿರತರ ಮೇಲೆ ಮತ್ತು ಪತ್ರಕರ್ತರ ಮೇಲೆ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ನಡೆದಿದೆ.
ಆದ್ದರಿಂದ ರಾಜ್ಯ ಸರ್ಕಾರವು ಕೂಡಲೇ ಈ ಘಟನೆಯ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ NRC ಮತ್ತು CAA ನ್ನು ಹಿಂಪಡೆಯಲು ಕೇಂದ್ರವನ್ನು ಒತ್ತಾಯಿಸಬೇಕು ಎಂದು KCF ಇಂಟರ್ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರಾದ ಹಾಜಿ ಶೈಖ್ ಬಾವಾ ಹಾಗೂ ಪ್ರ.ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿಯವರು ಸೌದಿ, ದಮ್ಮಾಮ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ