janadhvani

Kannada Online News Paper

ಭಾರತವನ್ನು ಶಿಥಿಲಗೊಳಿಸಲು ಬಿಡಲಾರೆವು- ಕಾಂತಪುರಂ ಎ.ಪಿ.ಉಸ್ತಾದ್

ಮಲಪ್ಪುರಂ,ಡಿ.13: ಸಂಸತ್ತಿನಲ್ಲಿ ಅಂಗೀಕಾರ ಪಡೆದು ಇದೀಗ ರಾಷ್ಟ್ರಪತಿಯಿಂದ ಅಂಕಿತ ಗೊಂಡು ಜಾರಿಯಾಗಿರುವ ಪೌರತ್ವ ತಿದ್ದುಪಡಿ ಮಸೂದೆ, ದೇಶದ ಮುಸ್ಲಿಮರನ್ನು ಕಿತ್ತೊಗೆಯಲಾಗುವುದು ಎಂಬ ಆತಂಕದಲ್ಲಿದ್ದಾರೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಭಾರತದ ಮಹತ್ತರವಾದ ಕಲ್ಪನೆಯನ್ನು ಶಿಥಿಲಗೊಳಿಸುವ ಹಕ್ಕು ಯಾವುದೇ ಸರ್ಕಾರಕ್ಕಿಲ್ಲ ಎಂದು ಕಾಂತಪುರಂ ಕೇಳಿದರು. ‘ಪೌರತ್ವ ಉದಾರವಲ್ಲ’ ಎಂಬ ವಿಷಯದ ಕುರಿತು ಎಸ್‌ವೈಎಸ್‌ನ ರಾಜ್ಯ ಸಮಿತಿಯು ಮಲಪ್ಪುರಂನಲ್ಲಿ ನಾಗರಿಕ ಹಕ್ಕುಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ತಿದ್ದುಪಡಿಯನ್ನು ಪ್ರಶ್ನಿಸಲು ಸುಪ್ರೀಂ ಕೋರ್ಟ್‌ನ್ನು ಸಮೀಪಿಸಲು ಸಮಸ್ಥ ಕೇರಳ ಜಮ್ ಇಯ್ಯತುಲ್ ಉಲೆಮಾ ನಿರ್ಧರಿಸಿದೆ. ಈ ಕಾನೂನು ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯ ಎಂಬ ಸಂವಿಧಾನದ ಕಲ್ಪನೆಗೆ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ 14 ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ ಈ ಮಸೂದೆ,ಭಾರತವು ಯಾವುದೇ ಧಾರ್ಮಿಕ ರಾಜ್ಯವಲ್ಲ ಆದ್ದರಿಂದಲೇ ಧರ್ಮದ ಆಧಾರದ ಮೇಲೆ ಇಲ್ಲಿ ಪೌರತ್ವ ನೀಡಬಾರದು.

ದೇಶವನ್ನು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಕ್ಕೆ ಕೊಂಡೊಯ್ಯಲು ನಾವು ಅನುಮತಿಸಬಾರದು. ಮುಸ್ಲಿಮೇತರರನ್ನು ಪೌರತ್ವ ಶಾಸನಕ್ಕೆ ಆಧಾರವಾಗಿ ನೋಡುವುದು ಆಘಾತಕಾರಿ.ಮುಸ್ಲಿಮರನ್ನು ನಿರ್ಮೂಲನೆ ಮಾಡಲು ಈ ತಿದ್ದುಪಡಿ ಮಸೂದೆಯು ಅಧಿಕೃತ ದಾಖಲೆಯಾಗಲಿದೆ . ಕೇಂದ್ರ ಸರ್ಕಾರ ಇದನ್ನು ಮರುಪರಿಶೀಲಿಸಬೇಕು. ಇದನ್ನೇ ನಾವು ಮತ್ತೆ ಮತ್ತೆ ನೆನಪಿಸುತ್ತಿದ್ದೇವೆ.

ಕಾನೂನು ರೂಪಿಸುವಾಗ ಈ ದೇಶದ ಅತ್ಯಂತ ಬಡ ವ್ಯಕ್ತಿಯ ಮುಖವಾಗಿರಬೇಕು ನಿಮ್ಮ ಮುಂದಿರಬೇಕಾದ್ದು ಎಂಬ ರಾಷ್ಟ್ರ ಪಿತ ಮಹಾತ್ಮಾ ಗಾಂಧಿಯವರ ಮಾತುಗಳನ್ನು ಎಲ್ಲರಿಗೂ ನೆನಪಿಸುತ್ತಿದ್ದೇವೆ. ಪೌರತ್ವ ಪಟ್ಟಿಯಿಂದ ಒಂದು ವಿಭಾಗವನ್ನು ಹೊರಗಿಡುವ ಪ್ರಯತ್ನಗಳನ್ನು ಒಪ್ಪಲಾಗುವುದಿಲ್ಲ. ಈ ಧಾರ್ಮಿಕ ವಿಭಜನೆಯು ಭಾರತದ ಸಂವಿಧಾನಕ್ಕೆ ಸವಾಲಾಗಿದೆ.ದೇಶದ ಮೂಲ ಮತ್ತು ತತ್ವಗಳನ್ನು ಅಸ್ಪಷ್ಟಗೊಳಿಸಲು ಯಾರೂ ಪ್ರಯತ್ನಿಸಬಾರದು. ಇದು ಭಾರತವನ್ನು ಭಾರತವನ್ನಾಗಿ ಮಾಡಿದ ಎಲ್ಲ ಮೌಲ್ಯಗಳನ್ನು ನಾಶಪಡಿಸುವ ಮಸೂದೆ. ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರೊಳಗೊಂಡ ಬೃಹತ್ ಆಂದೋಲನ ನಮಗೆ ಬೇಕು ”ಎಂದು ಕಾಂತಪುರಂ ಹೇಳಿದರು.

ಸಯ್ಯಿದ್ ಅಲಿ ಬಾಫಕಿ ತಂಙಳ್ ಪ್ರಾರ್ಥಿಸಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಸಯ್ಯಿದ್ ತಾಹಾ ತಂಙಲ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಇಬ್ರಾಹಿಮುಲ್ ಖಲೀಲ್ ಅಲ್ ಬುಖಾರಿ, ಪೊನ್ಮಲ ಅಬ್ದುಲ್ ಖಾದಿರ್ ಮುಸ್ಲಿಯಾರ್, ಸಿ. ಮುಹಮ್ಮದ್ ಫೈಝಿ, ವಂಡೂರ್ ಅಬ್ದುರ್ರಹ್ಮಾನ್ ಫೈಝಿ, ಡಾ. ಸಬ್ಯಾಸ್ಟಿಯನ್ ಪೋಲ್, ಮಾಲಿಯಕ್ಕಲ್ ಸುಲೈಮಾನ್ ಸಖಾಫಿ, ಇಎನ್ ಮೋಹನ್‌ದಾಸ್, ರಹ್ಮತುಲ್ಲಾಹ್ ಸಖಾಫಿ ಎಲಮರಮ್, ಡಾ. ಮುಹಮ್ಮದ್ ಕುಂಞಿ ಸಖಾಫಿ, ಸ.ಕೆ. ಹುಸೇನ್ ಮಾಸ್ಟರ್ ಮುಂತಾದವರು ಮಾತನಾಡಿದರು.ಮಜೀದ್ ಕಕ್ಕಾಡ್ ಸ್ವಾಗತಿಸಿದರು.