ದಮಾಮ್: ಕಣ್ಣೂರಿನಿಂದ ದಮ್ಮಾಮ್ಗೆ ಸರ್ವೀಸ್ ನಡೆಸಲು ಗೋ ಏರ್ಗೆ ಅನುಮತಿ ಲಭಿಸಿದೆ. ನೇರ ಸೇವೆಯು ಡಿಸೆಂಬರ್ 19 ರಿಂದ ಪ್ರಾರಂಭವಾಗಲಿದೆ ಎಂದು ಗೋ ಏರ್ ಇಂಟರ್ ನ್ಯಾಷನಲ್ ಆಪರೇಶನ್ಸ್ ಹಿರಿಯ ಜನರಲ್ ಮ್ಯಾನೇಜರ್ ಜಲೀಲ್ ಖಾಲಿದ್ ತಿಳಿಸಿದ್ದಾರೆ.
ಗೋ ಏರ್ ವಿಮಾನಗಳು ಕೆಲವು ಗಲ್ಫ್ ಕ್ಷೇತ್ರಗಳಿಗೆ ಹಾರಾಟ ನಡೆಸುತ್ತಿವೆ, ಆದರೆ ಇದೇ ಮೊದಲ ಬಾರಿಗೆ ದಮ್ಮಾಮ್ಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆರಂಭದಲ್ಲಿ, ವಾರಕ್ಕೆ ನಾಲ್ಕು ಸೇವೆಗಳು ಇರಲಿವೆ. ಬೆಳಿಗ್ಗೆ 9.55 ಕ್ಕೆ ದಮ್ಮಾಂನಿಂದ ಹೊರಟು ಸಂಜೆ 5 ಗಂಟೆಗೆ ಕಣ್ಣೂರು ತಲುಪಲಿದೆ. ಕಣ್ಣೂರಿನಿಂದ ಬೆಳಿಗ್ಗೆ 6.55 ಕ್ಕೆ ಹೊರಟು ಬೆಳಿಗ್ಗೆ 8.55 ಕ್ಕೆ ದಮ್ಮಾಂ ತಲುಪಲಿದೆ. ಹೊಸ ಹಾರಾಟದ ಸಮಯವನ್ನು ವ್ಯವಹಾರದ ದಿನಗಳನ್ನು ಉಳಿಸುವ ಸಾಧ್ಯತೆಗೆ ಅನುಗುಣವಾಗಿ ಹೊಂದಿಸಲಾಗಿದೆ.
ವಿಮಾನವು ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರ ದಮ್ಮಾಂನಿಂದ ಹೊರಡಲಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಋತುವಿನ ಲಾಭವನ್ನು ಪಡೆದುಕೊಳ್ಳುವ ವಿಮಾನ ಯಾನ ಕಂಪೆನಿಗಳ ಮಧ್ಯೆ ಪ್ರಯಾಣಿಕರಿಗೆ ಗೋ ಏರ್ ಒಂದು ಹಾದಿಗೆ 499 ರಿಯಾಲ್ ಮತ್ತು ಎರಡೂ ಕಡೆಗೆ 999 ರಿಯಾಲ್ ಮಾತ್ರ ದರ ನಿಗದಿ ಪಡಿಸಿದೆ. ಇದೇ ದರದಲ್ಲಿ 30 ಕೆಜಿ ಲಗೇಜ್ ಮತ್ತು 7 ಕೆಜಿ ಕೈ ಲಗ್ಗೇಜನ್ನು ಸಾಗಿಸಬಹುದು. ಇದು ತೆರಿಗೆಗಳು, ಟ್ಯಾಕ್ಸ್ ಗಳನ್ನು ಒಳಗೊಂಡಿವೆ ಎಂದು ಸಲೀಮ್ ಖಾಲಿದ್ ಹೇಳಿದರು.
ಕಣ್ಣೂರು ವಿಮಾನ ನಿಲ್ದಾಣವನ್ನು ಅವಲಂಬಿಸಿರುವ ಪ್ರಾಂತ್ಯದ ಪ್ರಯಾಣಿಕರು ನಿರಾಶೆಗೊಂಡಿದ್ದರು.
ಕಾಸರಗೋಡು, ಕೋಝಿಕೋಡ್, ವಯನಾಡ್ ಮತ್ತು ಮಂಗಳೂರು ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವ ಕಾರಣಕ್ಕಾಗಿ ಕಣ್ಣೂರನ್ನು ದಮ್ಮಾಂನಿಂದ ಮೊದಲ ಸೇವೆಗೆ ಆಯ್ಕೆ ಮಾಡಲಾಗಿದೆ ಎಂದು ಜಲೀಲ್ ಖಾಲಿದ್ ಹೇಳಿದರು. ಎಲ್ಲಾ ವಿಮಾನಗಳು ಯಶಸ್ವಿಯಾಗಿದ್ದು, ಕೇರಳದ ಇತರ ವಿಮಾನ ನಿಲ್ದಾಣಗಳಿಂದ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ದಮಾಮ್-ಕಣ್ಣೂರು ಮೊದಲ ವಿಮಾನಯಾನವನ್ನು ಬರಮಾಡಿಕೊಳ್ಳಲು ವಲಸಿಗರು ಹರ್ಷಗೊಂಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ