ರಿಯಾದ್: ಸೌದಿ ಅರೇಬಿಯಾದ ಸ್ವದೇಶೀಕರಣ ಯೋಜನೆಯಾದ ನೀತಾಕಾತ್ನಿಂದ ಹಳದಿ ವರ್ಗದ ಸಂಸ್ಥೆಗಳನ್ನು ಕೆಂಪು ವರ್ಗಕ್ಕೆ ವರ್ಗಾಯಿಸಲಾಗುವುದು. ಹೊಸ ಬದಲಾವಣೆ ಜನವರಿ 26ರಿಂದ ಜಾರಿಗೆ ಬರಲಿದೆ. ಇದನ್ನು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್-ರಾಹ್ಜಿ ಘೋಷಿಸಿದ್ದಾರೆ.
ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು 2011ರಲ್ಲಿ ನಿತಾಕಾತ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಸೌದೀಕರಣವನ್ನು ಅನುಷ್ಠಾನಗೊಳಿಸುವ ದೃಷ್ಟಿಯಿಂದ, ಈ ಯೋಜನೆಯನ್ನು ಕೆಂಪು, ಹಳದಿ, ತಿಳಿ ಹಸಿರು, ಮಧ್ಯಮ ಹಸಿರು, ಕಡು ಹಸಿರು ಮತ್ತು ಪ್ಲಾಟಿನಂ ಎಂದು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಕೆಂಪು ವರ್ಗವು ಒಂದು ನಿರ್ದಿಷ್ಟ ಶೇಕಡಾ ಸೌದೀಕರಣವನ್ನು ಕಾರ್ಯಗತಗೊಳಿಸದ ಸಂಸ್ಥೆಗಳನ್ನು ಒಳಗೊಂಡಿದ್ದು, ಅವರು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದಿಂದ ಸೇವೆಗಳನ್ನು ಪಡೆಯುವುದಿಲ್ಲ. ಇದಲ್ಲದೆ, ಕೆಂಪು ವರ್ಗದವರಿಗೆ ಕಾರ್ಮಿಕರ ಇಖಾಮಾಗಳು ಅಥವಾ ಕೆಲಸದ ಪರವಾನಗಿಗಳನ್ನು ನವೀಕರಿಸಲು ಅನುಮತಿಸಲಾಗುವುದಿಲ್ಲ.
ಹಳದಿ ಗುಂಪಿನ ಕಂಪೆನಿಗಳಿಗೆ ತಮ್ಮ ಕೆಲಸದ ಪರವಾನಗಿಯನ್ನು ನವೀಕರಿಸಲು ಮತ್ತು ನಿರ್ಬಂಧಗಳೊಂದಿಗೆ ಇಕಾಮಾವನ್ನು ನವೀಕರಿಸಲು ಅವಕಾಶ ನೀಡಲಾಗಿತ್ತು. ಹಳದಿ ವಿಭಾಗದಲ್ಲಿರುವ ಸಂಸ್ಥೆಗಳನ್ನು ಮುಂದಿನ ಜನವರಿ 26ರಿಂದ ಕೆಂಪು ವರ್ಗಕ್ಕೆ ವರ್ಗಾಯಿಸಲಾಗುವುದು. ಇದರೊಂದಿಗೆ, ಕೆಂಪು ವರ್ಗದವರ ಎಲ್ಲಾ ಮಾನದಂಡಗಳು ಹಳದಿ ವರ್ಗಕ್ಕೂ ಅನ್ವಯವಾಗಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು