ಮದೀನಾ ಮುನವ್ವರ : ಮಜ್ಲಿಸ್ ಆದೂರು ಮದೀನಾ ಮುನವ್ವರ ಘಟಕ ವತಿಯಿಂದ ಪ್ರಾರ್ಥನೆ ಮಜ್ಲಿಸ್ ಮದೀನಾ ಮುನವ್ವರ ದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ದಾರುಲ್ ಇರ್ಶಾದ್ ಎಜುಕೇಶನ್ ಅಕಾಡೆಮಿ ಮಾಣಿ ಇದರ ಆರ್ಗನೈಸರ್ ಉಮ್ಮರ್ ಕಾಮಿಲ್ ಸಖಾಫಿ ಉದ್ಘಾಟಿಸಿ ಸಯ್ಯದ್ ಕುಟುಂಬ ಹಾಗೂ ಮಜ್ಲಿಸ್ ಆದೂರಿನ ವಿಶೇಷತೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದೂರು ಮಜ್ಲಿಸ್ ರೂವಾರಿ ಸಯ್ಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮದನಿ ಆದೂರು ಅವರು ಮಾತನಾಡಿದರು. 21 ಸ್ಥಾಪನೆಗಳನ್ನೊಂಡಿರುವ ಆದೂರು ಎಜು ಪಾರ್ಕ್ ಅಲ್ಲಾಹನ ದೀನಿನ ಕೇಂದ್ರವಾಗಿ ಮಾರ್ಪಾಡಾಗಿದ್ದು, ಇತರ ಸಂಸ್ಥೆಗಳಿಗಿಂತ ಭಿನ್ನವಾಗಿ ಕಾರ್ಯಚರಿಸುತ್ತಿದೆ. ಇಲ್ಲಿ ಮದರಸ, ಶಾಲೆ ಮಾತ್ರವಲ್ಲದೆ ವಯಸ್ಕ ಮುಸ್ಲಿಂ ಮಹಿಳೆಯರಿಗಾಗಿ ಕುಲ್ಲಿಯ್ಯತ್ ಝಹ್ರಾ ಹಾಗೂ ವಯಸ್ಕ ಮುಸ್ಲಿಂ ಪುರುಷರಿಗಾಗಿ ಮಜ್ಲಿಸ್ ಸ್ಸುಫ್ಫಾ ಎಂಬ ವಿಶೇಷ ಕೋರ್ಸ್ ಗಳನ್ನು ನೀಡಲಾಗುತ್ತಿದ್ದು, 25ರಿಂದ72 ವಯಸ್ಸಿನ ವಿದ್ಯಾರ್ಥಿಗಳು ಇಲ್ಲಿ ಖುರಾನ್ ಕಲಿಯುತ್ತಿದ್ದಾರೆ.
ಸದ್ಯ ಬೆಂಗಳೂರಿನಲ್ಲೂ ಕೂಡ ಉಳ್ಳಿಯ್ಯತ್ ಝಹ್ರಾ ಹಾಗೂ ಮಜ್ಲಿಸ್ ಸ್ಸುಫ್ಫಾ ತರಗತಿ ಪ್ರಾರಂಬಿಸಲಾಗಿದ್ದು, ಅದರ ದಾಖಲಾತಿ ಈಗಾಗಲೇ ಆರಂಭವಾಗಿದೆ. ಧಾರ್ಮಿಕ ಅಕ್ಷರ ಜ್ಞಾನವಿಲ್ಲದ ವಯಸ್ಕ ಪುರುಷ ಹಾಗೂ ಮಹಿಳೆಯರು ಈ ಕೋರ್ಸ್‌ನ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ನವೆಂಬರ್ 10 ರಂದು ಮಂಗಳೂರಿನ ದೇರಳಕಟ್ಟೆಯಿಂದ ಎಜುಪಾರ್ಕ್ ಕಡೆಗೆ ನಬಿ ದಿನ ರ್ಯಾಲಿ ಹಾಗೂ ನವೆಂಬರ್8 ರಂದು ಹುಬ್ಬುನ್ನಬಿ ಕಾರ್ಯಕ್ರಮ ನಡೆಯಲಿದ್ದು, ಎ.ಪಿ.ಉಸ್ತಾದ್, ಪೆರೋಡ್ ಉಸ್ತಾದ್, ಮತ್ತಿತರ ಉಲಮಾಗಳು, ಸಾದಾತ್ ಗಳು ಭಾಗವಹಿಸಲಿದ್ದಾರೆ.
ನವೆಂಬರ್ 14ರಂದು ದಮಾಮಿನ ಹೋಲ್ಡೇಸ್ ಹೋಟೆಲ್ ನಲ್ಲಿ ಹಾಗೂ 22ರಂದು ರಿಯಾದಿನ ರಮದಾ ಹೋಟೆಲ್ ನಲ್ಲಿ ‘ಸ್ನೇಹ ತೀರಂ’ ಎಂಬ ನೆಬಿ ದಿನ ಕ್ಯಾಂಪೆನ್ ನಡೆಯಲಿದೆ ಎಂದರು.
ಈ ವೇಳೆ ಮಜ್ಲಿಸ್ ಆದೂರು ಮದೀನಾ ಮುನವ್ವರ ಘಟಕ ವತಿಯಿಂದ ತಂಙಳ್ ಅವರಿಗೆ ಕೋಟ್ ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ನಾಸೀರ್ ಬಾಂಬಿಲ, ತಾಜುದ್ದೀನ್ ಸುಳ್ಯ, ಅಶ್ರಫ್ ಸಖಾಫಿ ನೂಜಿ ,ಇಕ್ಬಾಲ್ ಕುಪ್ಪೆಪದವು, ಮುನೀರ್ ಬಾಂಬಿಲ, ಶಮೀಝ್ ಕುಪ್ಪೆಪದವು, ಹುಸೈನಾರ್ ಮಾಪಲ್, ಇಸ್ಮಾಯಿಲ್ ಉಳ್ಳಾಲ ಮತ್ತಿರರರು ಉಪಸ್ಥಿತರಿದ್ದರು.
ವರದಿ : ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು