ದುಬೈ: ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕಾಗದರಹಿತಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಆ್ಯಪ್ ಮೂಲಕ ಎಲ್ಲಾ ಸರಕಾರಿ ಇಲಾಖೆಗಳ ಸೇವೆಯನ್ನು ನೀಡುವಂತೆ ದುಬೈ ಯುವರಾಜ ನಿರ್ದೇಶನ ನೀಡಿದ್ದಾರೆ.
2021 ರ ನಂತರ, ದುಬೈನ ಯಾವುದೇ ಸರಕಾರಿ ಸಂಸ್ಥೆ ಕೂಡ ಕಾಗದದಲ್ಲಿ ದಾಖಲೆಗಳನ್ನು ಸಲ್ಲಿಸಲು ಆದೇಶ ನೀಡುವುದಿಲ್ಲ. ಸರಕಾರಿ ನೌಕರರು ಕಚೇರಿಯಲ್ಲಿ ಆಂತರಿಕ ವ್ಯವಹಾರಗಳಿಗೆ ಕಾಗದ ಬಳಸುವುದನ್ನು ಸಹ ನಿಲ್ಲಿಸಲಾಗುತ್ತದೆ. ದುಬೈನ ಯುವರಾಜ ಮತ್ತು ದುಬೈನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್-ಮಕ್ತೂಮ್ ಕಳೆದ ವರ್ಷ ದುಬೈ ಪೇಪರ್ಲೆಸ್ ಸ್ಟ್ರಾಟಜಿ ಘೋಷಿಸಿದ್ದರು.
ಮೊದಲ ವರ್ಷದಲ್ಲಿಯೇ 15 ಸರಕಾರಿ ಇಲಾಖೆಗಳು ಕಾಗದರಹಿತ ನೀತಿಯನ್ನು ಜಾರಿಗೆ ತರಲು ಮುಂದಾದವು. ‘ದುಬೈ ನೌ’ ಆ್ಯಪ್ ಮೂಲಕ 88 ಸರಕಾರಿ ಸೇವೆಗಳನ್ನು ಲಭ್ಯಗೊಳಿಸಲಾಗಿದೆ. 2021ರ ಡಿಸೆಂಬರ್ 12 ರಂದು, ಎಲ್ಲಾ ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಂತೆ ಪ್ರಸ್ತಾಪಿಸಲಾಗಿದೆ. ಡಿಜಿಟಲೀಕರಣದಿಂದ, ದುಬೈ ನಿವಾಸಿಗಳಿಗೆ ವರ್ಷಕ್ಕೆ 40 ಗಂಟೆಗಳ ಉಳಿತಾಯ ಮಾಡಬಹುದು. ಮಿಲಿಯನ್ ಗಟ್ಟಲೆ ಪೇಪರ್ಗಳನ್ನು ಉಳಿಸಿ 1,30,000 ಮರಗಳನ್ನು ಉಳಿಸಬಹುದು. ಈ ಮೂಲಕ 900 ಮಿಲಿಯನ್ ದಿರ್ಹಂ ಉಳಿಸಬಹುದು ಎಂದು ಅಂದಾಜಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ