ಗುರುವಾಯನಕೆರೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಗುರುವಾಯನಕೆರೆ ಸೆಕ್ಟರ್ ವತಿಯಿಂದ ULAZ-2K19 ಕಾರ್ಯಕ್ರಮವು ದಿನಾಂಕ 13/10/2019ನೇ ಅದಿತ್ಯವಾರ ಸಂಜೆ 7:30ಗಂಟೆಗೆ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಹಾಲ್ ಜಾರಿಗೆಬೈಲು-ನಾಳ ಇಲ್ಲಿ ಅಧ್ಯಕ್ಷರಾದ ಜಮಾಲುದ್ದೀನ್ ಮದನಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
SYS ಜಾರಿಗೆಬೈಲು ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ನಾಳ ದುವಾ ನೆರವೇರಿಸಿದರು,ದ.ಕ ಜಿಲ್ಲಾ ಸದಸ್ಯರಾದ ಇಕ್ಬಾಲ್ ಮಾಚಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
SSF ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಪ್ರಸ್ತಾವಿಕ ಭಾಷಣ ಮಾಡಿದರು.
ಜಾರಿಗೆಬೈಲು ಮುದರ್ರಿಸ್ ಬಹು|ಮಹಮ್ಮದ್ ಯಾಸಿರ್ ಪಾಝಿಲ್ ತರಗತಿ ಮಂಡಿಸಿದರು.
ಬಳಿಕ SSF ಗುರುವಾಯನಕೆರೆ ಸೆಕ್ಟರ್ ಪ್ರತಿಭೋತ್ಸವ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಈಸ್ಟ್ ಝೋನ್ ಸದಸ್ಯರಾದ ಸಿದ್ದೀಕ್ ಪರಪ್ಪು, SSF ಬೆಳ್ತಂಗಡಿ ಡಿವಿಷನ್ ಕೋಶಾಧಿಕಾರಿ ಹಾರೀಸ್ ಕುಕ್ಕುಡಿ,ಬಿಜೆಎಂ ಜಾರಿಗೆಬೈಲು-ನಾಳ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಗೋವಿಂದೂರು,ಉಪಾಧ್ಯಕ್ಷರಾದ ರಪೀಕ್ ಮುಸ್ಲಿಯಾರ್,ಕೋಶಾಧಿಕಾರಿ ಹಮೀದ್ ಮೆಸ್ಕಾಂ,SSF ಜಾರಿಗೆಬೈಲು-ನಾಳ ಅಧ್ಯಕ್ಷರಾದ ನಾಸೀರ್ ನಡತ್ತೊಟ್ಟು,ಸೆಕ್ಟರ್ ನ ಎಲ್ಲಾ ಸದಸ್ಯರು ಹಾಗೂ ಯುನಿಟ್‌ಗಳ ನಾಯಕರು ಉಪಸ್ಥಿತರಿದ್ದರು.
SSF ಗುರುವಾಯನಕೆರೆ ಸೆಕ್ಟರ್ ಕಾರ್ಯದರ್ಶಿ ಫಯಾಝ್ ಗೇರುಕಟ್ಟೆ ಸ್ವಾಗತಿಸಿ,ಕಾರ್ಯದರ್ಶಿ ರಹ್ಮಾನ್ ಮಾಸ್ಟರ್ ಧನ್ಯವಾದವಿತ್ತರು.
ವರದಿ: ಫಯಾಝ್ ಗೇರುಕಟ್ಟೆ






