ಅಲ್-ಖಾದಿಸ ರಿಯಾದ್ ಸಮಿತಿ: ಫ್ಯಾಮಿಲಿ ಮುಲಾಖಾತ್’19- ಯಶಸ್ವಿಗೆ ಹಝ್ರತ್ ಕರೆ

ರಿಯಾಧ್: ಅಲ್-ಖಾದಿಸ ರಿಯಾದ್ ಸಮಿತಿ ವತಿಯಿಂದ ಅಕ್ಟೋಬರ್ 24 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ, ಸುಲೈ ಎಕ್ಸಿಟ್ 16 ತಾಕತ್ ವ್ಯೂ ರಿಸಾರ್ಟ್ ನಲ್ಲಿ ನಡೆಯುವ “ಫ್ಯಾಮಿಲಿ ಮುಲಾಖಾತ್ 2019 ಇದರ ಬೃಹತ್ ಪ್ರಚಾರ ಸಭೆ ತಾ:11-10-2019 ಶುಕ್ರವಾರ ಜುಮಾ ನಂತರ ಬತ್ತಾ ಅಲ್ ಮಾಸ್ ಅಡಿಟೋರಿಯಂ ನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್-ಖಾದಿಸ ರಿಯಾದ್ ಸಮಿತಿ ಅಧ್ಯಕ್ಷ ಜನಾಬ್ ಇಸ್ಮಾಯಿಲ್ ಕನ್ನಂಗಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದ ಕೇಂದ್ರಬಿಂದು ಅಲ್ ಖಾದಿಸ ಸ್ಥಾಪಕಾಧ್ಯಕ್ಷ ಬಹುಮಾನ್ಯರಾದ ಡಾ ಮೌಲಾನಾ ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ ಮುಖ್ಯ ಭಾಷಣ ಮಾಡಿದರು. ಅಲ್ ಖಾದಿಸ ಶ್ರೇಯೀಭಿವೃದ್ಧಿಗೆ ನಿಷ್ಕಳಂಕವಾಗಿ ಶ್ರಮಿಸುತ್ತಿರುವ ರಿಯಾದ್ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ, ಬುದ್ದಿಮಾಂದ್ಯ ಮಕ್ಕಳ ಆಸ್ಪತ್ರೆ, ಶಾಲೆ ಹಾಗೂ ಇನ್ನಿತರ ಯೋಜನೆಗಳ ಯಶಸ್ವಿಗಾಗಿ ರಿಯಾದ್ ನಲ್ಲಿ ಹಮ್ಮಿಕೊಂಡಿರುವ ಫ್ಯಾಮಿಲಿ ಮುಲಾಖಾತ್ ವಿಜಯಕ್ಕಾಗಿ ರಿಯಾದ್ ನಲ್ಲಿರುವ ಎಲ್ಲಾ ಸಂಘ-ಸಂಸ್ಥೆಗಳು ಒಗ್ಗೂಡಿ ಶ್ರಮಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಕೆ.ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷ ಫಾರೂಕ್ ಸಅದಿ Hಕಲ್ಲು , ಅಲ್ ಖಾದಿಸ ರಿಯಾದ್ ಸಮಿತಿ ಕೋಶಾಧಿಕಾರಿ ಅಬೂಬಕರ್ ಸಾಲೆತ್ತೂರು, ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಬಜ್ಪೆ, ದಾವೂದ್ ಕಜೆಮಾರ್, ಅಬ್ದುಲ್ ರಹ್ಮಾನ್ ಮುಲ್ಕಿ, ಮುಹಮ್ಮದ್ ಅಲೀ ಗುರುಪುರ, ಉಮರ್ ಅಳಕೆಮಜಲು, ನಿಝಾಂ ಸಾಗರ, ಬಶೀರ್ ತಲಪಾಡಿ, ಅಬ್ದುಲ್ಲಾ ಮದನಿ ಗುರುವಾಯನಕೆರೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಫಾರೂಕ್ ಸಅದಿ Hಕಲ್ಲು ಸ್ವಾಗತ ಭಾಷಣ ಮಾಡಿದರು. ಕೊನೆಯಲ್ಲಿ ಪ್ರ.ಕಾರ್ಯದರ್ಶಿ ಅಝೀಝ್ ಬಜ್ಪೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!