ಅಲ್ ಹಸ್ಸ: ಅಲ್ ಮದೀನ ಮಂಜನಾಡಿ ಅಲ್ ಹಸ್ಸ ಘಟಕ ಇದರ ಮಹಾಸಭೆ ಮತ್ತು ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಉಸ್ತಾದ್ ಇಬ್ರಾಹಿಂ ಸಅದಿ ಮಚ್ಚಂಪಾಡಿ ಇವರ ಅಧ್ಯಕ್ಷತೆಯಲ್ಲಿ ಸಅದಿಯಃ ಹಾಲ್ ಹಫೂಫಿನಲ್ಲಿ ಗುರುವಾರ ರಾತ್ರಿ ನಡೆಯಿತು.

ಅಲ್ ಮದೀನಾ ದಮ್ಮಾಂ ಓರ್ಗನೇಝರ್ ಹೈದರ್ ಅಲಿ ನಹೀಮಿ ಖಿರಾಅತ್ ಪಠಿಸಿದರು.ಅಲ್ ಮದೀನ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ,ಉಧ್ಯಮಿ ಹಾಜಿ ಅಬ್ದುಲ್ಲಾ ಎನ್‌ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮರ್ಹೂಂ ಅಬ್ಬಾಸ್ ಉಸ್ತಾದರ ಸಾಧನೆಯನ್ನು ವಿವರಿಸಿ,ಅವರು ತೋರಿಸಿಕೊಟ್ಟ ಹಾದಿಯೇ ನಮ್ಮ ಪಾರತ್ರಿಕ ಯಶಸ್ವಿಗೆ ಭದ್ರ ಬುನಾದಿ ಎಂದರು.
ಚುನಾವಣಾ ವೀಕ್ಷರಾಗಿ ಆಗಮಿಸಿದ ಅಲ್ ಮದೀನ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ಮಾತನಾಡಿ ಅಲ್ ಮದೀನ ಕರ್ಣಾಟಕದ ಅಭಿಮಾನ.ಕಳೆದ ಇಪ್ಪತ್ತೈದು ವರ್ಷದಿಂದ ಅಲ್ ಮದೀನ ಯಶಸ್ವಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಮುಂದೆಯು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಅತ್ಯುತ್ತಮ ಕಮಿಟಿ ರಚನೆ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಸ್ಮಾನ್ ಮಂಜನಾಡಿ,ಬಶೀರ್ ತೋಟಾಲ್,ರಹೀಂ ಉಚ್ಚಿಲ್,ಇಸ್ಮಾಯಿಲ್ ಪೊಯ್ಯಲ್,ಸಮದ್ ಹೊಸಂಗಡಿ,ಅಲ್ತಾಫ್ ಮತ್ತು ಸುಲೈಮನ್ ಇವರುಗಳು ಉಪಸ್ಥಿತಿಯಿದ್ದರು.

ಇಕ್ಬಾಲ್ ಮಲ್ಲೂರು ಅವರ ನೇತೃತ್ವದಲ್ಲಿ ಹಳೆ ಕಮಿಟಿಯನ್ನು ಬರ್ಖಾಸ್ತು ಮಾಡಿ ಹೊಸ ಕಮಿಟಿ ರಚಿಸಲಾಯಿತು.
ಗೌರವಾಧ್ಯಕ್ಷ:ಮೊಯಿದಿನ್ ಹಾಜಿ ಉರುಮಣೆ, ಅಧ್ಯಕ್ಷ : ಹಯಾತ್ ನಝೀರ್, ಉಪಾಧ್ಯಕ್ಷ ಇಬ್ರಾಹಿಂ ಸಅದಿ ಮಚ್ಚಂಪಾಡಿ,ಅಬೂಬಕರ್ ಕಿಲ್ಲೂರು ಮತ್ತು ಅಬ್ದುಲ್ ಹಮೀದ್ ಕೈರಂಗಳ,
ಪ್ರಧಾನ ಕಾರ್ಯದರ್ಶಿ: ಇಸ್ಹಾಖ್ ಸಿ.ಐ.ಫಜೀರ್, ಜೊತೆಕಾರ್ಯದರ್ಶಿ ಅಝೀಝ್ ಉರುಮಣೆ ಮತ್ತು ಹುಸೈನ್ ಮಂಜನಾಡಿ, ಖಜಾಂಚಿ ಹೈದರ್ ಬಜ್ಪೆ, ಎಡ್‌ವೈಸರ್ ಮೊಗ್ರಾಲ್ ಉಸ್ತಾದ್, ಅಸ್ರು ಬಜ್ಪೆ, ಓರ್ಗನೇಝರ್ ಕಾರ್ಯದರ್ಶಿ ಹಾರೀಸ್ ಕಾಜೂರು ಮತ್ತು ಹಬೀಬ್ ಉಸ್ತಾದ್ ಮರ್ಧಾಲ ಇವರುಗಳನ್ನು ಆಯ್ಕೆಮಾಡಲಾಯಿತು.
ಕಾರ್ಯಕಾರಿ ಸಮಿತಿಗೆ ಇಬ್ರಾಹಿಂ ಕಾಜೂರು,
ಹಕೀಂ ನೆಕ್ಕರೆ,ಇಕ್ಬಾಲ್ ಗುಲ್ವಾಡಿ, ಸಮದ್ ಬೇಂಗಿಲ, ಆರೀಫ್ ಪ್ರವಾಸಿ, ಅಸ್ಫಾಕ್ ಮಂಜನಾಡಿ, ಶಾಫಿಚ್ಚ ಸಫ ಎಂಬಸ್ಸಿ,ರಫೀಖ್ ಉರುಮಣೆ, ಸಲಾಂ ಪ್ರವಾಸಿ, ಇರ್ಫಾನ್ ಮೋರ್ಲ ಮತ್ತು ಅಸ್ರು ಬಜ್ಪೆ ಇವರುಗಳನ್ನು ಆಯ್ಕೆಮಾಡಲಾಯಿತು.
ಅಲ್ ಕೋಬರ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಲೆಬೆಟ್ಟು,ದಮ್ಮಾಂ ವಲಯ ಸಮಿತಿ ಅಧ್ಯಕ್ಷ ಉಸ್ಮಾನ್ ಮಂಜನಾಡಿ ಇವರುಗಳು ಹೊಸ ಕಮಿಟಿಗೆ ಶುಭ ಹಾರೈಸಿದರು.
ಇಸ್ಹಾಖ್ ಸಿ.ಐ.ಫಜೀರ್ ಸ್ವಾಗತಿಸಿ,ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ