ಕುವೈಟ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಇದರ ನಾರ್ತ್ ಝೋನಿನ ವತಿಯಿಂದ ಮೊಹರಂ ಹಿಜರಿ ಸಂದೇಶ ಕಾರ್ಯಕ್ರಮವು ನಾಶಾತ್ ಹಾಲ್ ಮುರ್ಗಾಬ್ ಸಿಟಿ ಯಲ್ಲಿ ನಡೆಯಿತು.
ನಾರ್ತ್ ಝೋನಿನ ಪ್ರಧಾನ ಕಾರ್ಯದರ್ಶಿ ಶೌಕತ್ ಶಿರ್ವ ಸ್ವಾಗತ ಮಾಡಿದರು. ಅಬ್ಬಾಸ್ ಬಳಂಜ ಇವರ ಅಧ್ಯಕ್ಷತೆಯಲ್ಲಿ , ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. inc ಸಂಘಟನಾ ಕಾರ್ಯದರ್ಶಿ ಬಹು ಹುಸೈನ್ ಎರ್ಮಾಡ್ ಉಸ್ತಾದ್ ಮಾತನಾಡಿ ಸಂಘಟನೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಆದ್ದರಿಂದ ತಾವೆಲ್ಲರೂ ಕೈ ಜೋಡಿಸ ಬೇಕೆಂದು ವಿನಂತಿಸಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಝಕರಿಯಾ ಆನೇಕಲ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಅಧ್ಯಕ್ಷರಾದ ಯಾಕುಬ್ ಕಾರ್ಕಳ ಮಾತನಾಡಿ ಕರ್ನಾಟಕ ದಲ್ಲಿ ಸಂಭವಿಸಿದ ಪ್ರವಾಹಕ್ಕೆ ತುತ್ತಾದ ಪ್ರದೇಶದ ಕುಟುಂಬಗಳಿಗೆ ಕೆಸಿಎಫ್ ನ ಎಲ್ಲಾ ಸದಸ್ಯರು ಸಾಂತ್ವನದ ಪರಿಹಾರ ನಿಧಿಗೆ ಸಹಾಯ ಹಸ್ತ ನೀಡ ಬೇಕೆಂದು ವಿನಂತಿಸಿಕೊಂಡರು.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಸಿಟಿ ಸೆಕ್ಟರ್ ನ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಬಹು: ಬಶೀರ್ ಸಖಾಫಿ ಉಸ್ತಾದ್ ರವರು ಮೊಹರಂ ಹಿಜರಿ ಸಂದೇಶದ ವಿಶೇಷತೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಕೊನೆಯಲ್ಲಿ ಬಹುಯ:ಶಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದರು ದುವಾ ನೆರವೇರಿಸಿದರು.
ಕಾರ್ಯಕ್ರಮ ದಲ್ಲಿ ಕುವೈಟ್ ಅಲ್ ಮದೀನಾ ಅಧ್ಯಕ್ಷರಾದ ಅಹ್ಮದ್ ಬಾವ, ಇಬ್ರಾಹಿಂ ವೇಣೂರು ಪ್ರಕಾಶನ ವಿಭಾಗದ ಅಧ್ಯಕ್ಷರು,ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಮೂಸ ಇಬ್ರಾಹಿಂ, ಸಂಘಟನಾ ವಿಭಾಗದ ಕಾರ್ಯದರ್ಶಿ ತೌಫೀಕ್ ಅಡ್ಡೂರು ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರು ಝೋನಿನ ನಾಯಕರು ಮತ್ತು ಸೆಕ್ಟರಿನ ಎಲ್ಲಾ ನಾಯಕರು ಪಾಲ್ಗೊಂಡಿದ್ದರು.ವಹೀಬ್ ಕೆ. ಸಿ ರೋಡ್ ಧನ್ಯವಾದ ಗೈದರು.
ವರದಿ: ಇಬ್ರಾಹಿಂ ವೇಣೂರು
ಪ್ರಕಾಶನ ವಿಭಾಗ ಕುವೈತ್















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ