ಮಲ್‌ಜ‌ಅ್‌: ಶರಫುಲ್ ಉಲಮಾ ಅನುಸ್ಮರಣೆ, ಪೊಸೋಟ್ ತಂಙಳ್ ಪ್ರಶಸ್ತಿ ಪ್ರಧಾನ.

ಉಜಿರೆ:ಮಲ್‌ಜ‌ಅ್‌ ದಅ್‌ವಾ ಮತ್ತು ರಿಲೀಫ್ ಸೆಂಟರ್ ಕಾಶಿಬೆಟ್ಟು ಉಜಿರೆ ಇದರ ಮಾಸಿಕ ದ್ಸಿಕ್ರ್ ಸ್ವಲಾತ್ ಮಜ್ಲಿಸ್,ಪೊಸೋಟ್ ತಂಙಳ್ 4ನೇ ಉರೂಸ್,ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ ಹಾಗೂ ಝೈನುಲ್ ಉಲಮಾ ಮಾಣಿ ಉಸ್ತಾದರಿಗೆ ಪೊಸೋಟ್ ತಂಙಳ್ ಅವಾರ್ಡ್ ಪ್ರಧಾನ ಕಾರ್ಯಕ್ರಮವು ದಿನಾಂಕ 21-08-2019 ನೇ ಬುಧವಾರ ಮಗ್ರಿಬ್ ನಮಾಝಿನ ಬಳಿಕ ಸಯ್ಯಿದ್ ಆಲವಿ ಜಲಾಲುದ್ದೀನ್ ಅಲ್’ಹಾದಿ ತಂಙಳ್ ಉಜಿರೆ ಇವರ ನೇತ್ರತ್ವದಲ್ಲಿ ಮಲ್‌ಜ‌ಅ್‌ ಕ್ಯಾಂಪಸ್’ನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಅಬ್ದುಸ್ಸಲಾಂ ಮದನಿ,ಮಲಪ್ಪುರಂ ಉದ್ಘಾಟಿಸಿದರು.
ಝೈನುಲ್ ಉಲಮಾ ಎಂ.ಹಮೀದ್ ಮುಸ್ಲಿಯಾರ್,ಮಾಣಿ ಇವರಿಗೆ ಪೊಸೋಟ್ ತಂಙಳ್ ಅವಾರ್ಡ್ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮೇಲೆ ಖತಮುಲ್ ಕುರ್’ಆನ್ ಹಾಗೂ ತಹ್ಲೀಲ್ ಸಮರ್ಪಿಸಲಾಯಿತು. ಮಹಮ್ಮದ್ ಕುಂಞಿ ಅಮ್ಜದಿ ಶುಭ ಹಾರೈಸಿ ಮಾತನಾಡಿದರು.
ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ತಂಙಳ್ ಅಲ್ ಬುಖಾರಿ ಮಳ್’ಹರ್ ದುಃವಾ ನೇತ್ರತ್ವ ನೀಡಿದರು.
ಈ ಕಾರ್ಯಕ್ರದಲ್ಲಿ ದಾರುಲ್ ಇರ್ಶಾದ್ ಡೈರೆಕ್ಟರ್ ಶರೀಫ್ ಸಖಾಫಿ ಮಾಣಿ,ಇಸ್ಮಾಯಿಲ್ ಸಅದಿ ಮಾಚಾರು,ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ,SSF ದ.ಕ ಜಿಲ್ಲಾ ಉಪಾಧ್ಯಕ್ಷ ಮುನೀರ್ ಸಖಾಫಿ ಉಳ್ಳಾಲ,ಕೋಶಾಧಿಕಾರಿ M H ಝುಹ್ರಿ ಕೊಂಬಾಳಿ,ಖುಬೈಬ್ ತಂಙಳ್,M.H ಮದನಿ ಆತೂರು, ಖಲಂದರ್ ಶರೀಫ್ ಕಕ್ಕೆಪದವು,ಹಾಗೂ ವಿವಿಧ ರಾಷ್ಟ್ರಗಳ KCF ನಾಯಕರು ಉಪಸ್ಥಿತರಿದ್ದರು.

ವರದಿ: ಎಂ.ಎಂ.ಉಜಿರೆ.

Leave a Reply

Your email address will not be published. Required fields are marked *

error: Content is protected !!