ವೇಣೂರು:ಕರಿಮಣೇಲು ಗ್ರಾಮದ ಶಾಂತಿನಗರ ಎಂಬಲ್ಲಿ ಬಡ-ಅನಾಥ-ನಿರ್ಗತಿಕರ ಆಶಾಕಿರಣವಾಗಿ ಮತ್ತು ಸಮುದಾಯದ ಏಳಿಗೆಗಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆ “ನುಸ್ರತುಲ್ ಮಸಾಕೀನ್ ಶಾಂತಿನಗರ(ರಿ.)” ಇದರ ಮಹಾಸಭೆಯು ದಿನಾಂಕ 22.08.2019 ರಂದು ಸಂಸ್ಥೆಯ ಗೌರವಾಧ್ಯಕ್ಷ ಉಮರುಲ್ ಫಾರೂಕ್ ಸಖಾಫಿಯವರ ದುಆ ಮತ್ತು ಸಭಾಧ್ಯಕ್ಷತೆಯಲ್ಲಿ ಕೈರೋಳಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು G.S.ಅನ್ಸಾರ್ ಸಖಾಫಿಯವರು ನೆರವೇರಿಸಿದರು.ವಾರ್ಷಿಕ ವರದಿಯನ್ನು ಪ್ರ.ಕಾರ್ಯದರ್ಶಿ ಝುಭೈರ್ ಶಾಂತಿನಗರ ವಾಚಿಸಿದರು, ಕೋಶಾಧಿಕಾರಿ K.ಮುಹಮ್ಮದ್ ಗುಂಪಕಲ್ಲು ಇವರು ಲೆಕ್ಕಪತ್ರ ಮಂಡನೆ ಮಾಡಿದರು.
2019-20 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ S.A.ರಶೀದ್ ಶಾಂತಿನಗರ, ಪ್ರ.ಕಾರ್ಯದರ್ಶಿಯಾಗಿ ನೌಶಾದ್ ಕೈರೋಳಿ,ಕೋಶಾಧಿಕಾರಿಯಾಗಿ P.M.ಲತೀಫ್ ಮತ್ತು ಸಂಘದ ಉಸ್ತುವಾರಿಯಾಗಿ K.ಮುಹಮ್ಮದ್ ಗುಂಪಕಲ್ಲು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಝುಭೈರ್ ಕೈರೋಳಿ, ಶಾಹುಲ್ ಹಮೀದ್ ಶಾಂತಿನಗರ ಮತ್ತು G.S.ಅನ್ಸಾರ್ ಸಖಾಫಿಯವರನ್ನು ಆಯ್ಕೆಮಾಡಲಾಯಿತು ಜೊತೆಕಾರ್ಯದರ್ಶಿಗಳಾಗಿ ನಾಸಿರ್ ಪಡ್ಡಂದಡ್ಕ ಮತ್ತು ತೌಫೀಕ್ ವೇಣೂರು ಇವರನ್ನು ಆಯ್ಕೆ ಮಾಡಲಾಯಿತು. ನಂತರ ಸಂಸ್ಥೆಯ ಅಬಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಯಿತು.
ಇಸ್ಮಾಯಿಲ್ ಮರ್ಝೂಕ್ ಸ್ವಾಗತಿಸಿದರು,ಕೊನೆಯಲ್ಲಿ ನೂತನ ಕಾರ್ಯದರ್ಶಿ ನೌಶಾದ್ ಕೈರೋಳಿ ಧನ್ಯವಾದ ಮಾಡಿದರು.
ವರದಿ: ಝುಭೈರ್ ಶಾಂತಿನಗರ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ