ಕೆಸಿಎಫ್ INC ನೂತನ ಕಾರ್ಯದರ್ಶಿಯವರಿಗೆ ಸೌದಿಯಲ್ಲಿ ಅದ್ದೂರಿ ಸ್ವಾಗತ

ದಮ್ಮಾಮ್.ಆ,23: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಂತಾರಾಷ್ಟ್ರೀಯ ಸಮಿತಿ INC ಇದರ ಪ್ರ,ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಖಮರುದ್ದೀನ್ ಗೂಡಿನಬಳಿಯವರಿಗೆ ಸೌದಿ ಅರೇಬಿಯಾದಲ್ಲಿ ಅದ್ದೂರಿ ಸ್ವಾಗತ.

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಂತಾರಾಷ್ಟ್ರೀಯ ಸಮಿತಿಯ ಮಹಾ ಸಭೆಯು ಆ,18 ರಂದು ಮಂಗಳೂರಿನಲ್ಲಿ ನಡೆಯಿತು.

ಡಾ.ಹಾಜಿ ಶೈಖ್ ಬಾವಾ, ದುಬೈ(ಅಧ್ಯಕ್ಷರು), ಖಮರುದ್ದೀನ್ ಗೂಡಿನಬಳಿ, ಸೌದಿ(ಪ್ರ.ಕಾರ್ಯದರ್ಶಿ), ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ,ಅಬುಧಾಬಿ (ಕೋಶಾಧಿಕಾರಿ) ಇವರನ್ನು ನೂತನ ಸಾರಥಿಗಳಾಗಿ ಆಯ್ಕೆ ಮಾಡಲಾಯಿತು.

ಇದೀಗ ಐಎನ್ ಸಿ ಯ ಪ್ರ.ಕಾರ್ಯದರ್ಶಿಯಾಗಿ ಆಯ್ಕೆಗೊಂಡು ಸೌದಿಗೆ ಮರಳಿದ ಖಮರುದ್ದೀನ್ ಗೂಡಿನಬಳಿ ಯವರನ್ನು ಸೌದಿ ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಶೀದ್ ಸಖಾಫಿ ಮಿತ್ತೂರ್, ಇಖ್ಬಾಲ್ ಕೈರಂಗಳ,ಭಾಷಾ ಗಂಗಾವಳಿ, ಫೈಝಲ್ ಕೃಷ್ಣಾಪುರ,ಮುಹಮ್ಮದ್ ಮಲೆಬೆಟ್ಟು, ಇಬ್ರಾಹಿಂ ವಳವೂರು, ಆಸಿಫ್ ಗೂಡಿನಬಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!