ದೋಹಾ : ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ಅಧೀನದ ದೋಹಾ ಝೋನ್ ಇದರ ವಾರ್ಷಿಕ ಮಹಾಸಭೆಯು ತಾ: 25-07-2019 ರಂದು ರಾತ್ರಿ ನೀಲಿಮಾ ಅಡಿಟೋರಿಯಂನಲ್ಲಿ, ಕೆ.ಸಿ.ಎಫ್ ಖತ್ತರ್ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಪಾತೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ದೋಹಾ ಝೋನ್ ಉಸ್ತುವಾರಿಯಾದ ಫಾರೂಕ್ ಕೃಷ್ಣಾಪುರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಕೆ.ಸಿ.ಎಫ್.ಸಂಘಟನೆಯು ಯಾವ ಮಟ್ಟಕ್ಕೆ ಬೆಳೆದಿದೆ ಎಂಬುದರ ಬಗ್ಗೆ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಹನೀಫ್ ಪಾತೂರ್ ಮಾತನಾಡಿ ಕೆ.ಸಿ.ಎಫ್ ದೋಹಾ ಝೋನ್ ಕಾರ್ಯವೈಖರಿಯ ಬಗ್ಗೆ, ಕೆ.ಸಿ.ಎಫ್. ಸಂಘಟನೆಯ ಮಹತ್ವ ಹಾಗೂ ಸಂಘಟನೆಯ ಅಗತ್ಯತೆಯ ಕುರಿತು ಸವಿವರವಾಗಿ ವಿವರಿಸಿದರು.
2017-19 ನೇ ಸಾಲಿನ ವರದಿ ಹಾಗೂ ಲೆಕ್ಕ ಪತ್ರವನ್ನು ಝೋನ್ ಪ್ರಧಾನ ಕಾರ್ಯದರ್ಶಿ ಝುಬೈರ್ ತುರ್ಕಳಿಕೆ ಮಂಡಿಸಿದರು. ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯ ನೇತೃತ್ವವನ್ನು, ಚುಣಾವಣಾ ಅಧಿಕಾರಿಯಾಗಿ ಆಗಮಿಸಿದ , ಕೆ.ಸಿ.ಎಫ್. ರಾಷ್ಟ್ರೀಯ ಅಧ್ಯಕ್ಷರಾದ ರಹೀಂ ಸ’ಅದಿ ವಹಿಸಿದ್ದರು. ವೇದಿಕೆಯಲ್ಲಿ ಕೆ.ಸಿ.ಎಫ್. ರಾಷ್ಟ್ರೀಯ ನಾಯಕರಾದ ಕಬೀರ್ ದೇರಳಕಟ್ಟೆ, ಮುನೀರ್ ಮಾಗುಂಡಿ, ಖಾಲಿದ್ ಹಿಮಮಿ, ಯೂಸುಫ್ ಸಖಾಫಿ ಅಯ್ಯಂಗೇರಿ, ಹಾಫಿಳ್ ಫಾರೂಕ್ ಉಸ್ತಾದ್ ಹಾಗೂ ಅಲ್ ಮದೀನ ಸಂಸ್ಥೆಯ ಖತ್ತರ್ ಸಮಿತಿಯ ಅಧ್ಯಕ್ಷರಾದ ಹಾಜಿ ಅರಬಿ ಕುಂಜ್ಙಿ ಉಪಸ್ಥಿತಿಯಿದ್ದರು.
ಸಭೆಯ ಮೊದಲಿಗೆ ರಹೀಂ ಸ’ಅದಿ ಯವರು ದುಆ ನೆರವೇರಿಸಿದರೆ, ಸಿದ್ದೀಖ್ ಹಂಡುಗೋಳಿ ಸ್ವಾಗತಿಸಿ, ಕೊನೆಯಲ್ಲಿ ನೂತನ ಪ್ರ.ಕಾರ್ಯದರ್ಶಿ ಹಾಷಿರ್ ಕೆ.ಸಿ.ರೋಡ್ ವಂದಿಸಿದರು.

ಕೆ.ಸಿ.ಎಫ್ ದೋಹಾ ಝೋನ್ 2019/20 ನೇ ಸಾಲಿನ ನೂತನ ಸಮಿತಿ ಈ ಕೆಳಗಿನಂತಿವೆ.
ಅಧ್ಯಕ್ಷರು: ಯಹ್ಯಾ ಸ’ಅದಿ ಕೂಡಗು
ಪ್ರ.ಕಾರ್ಯದರ್ಶಿ: ಹಾಷಿರ್ ಕೆ.ಸಿ.ರೋಡ್
ಕೋಶಾಧಿಕಾರಿ: ರಿಝ್ವಾನ್ ಸಾಗರ
ಸಂಘಟನಾ ವಿಭಾಗ :
ಅಧ್ಯಕ್ಷ – ಖಲೀಲ್ ಉರುಮಣೆ
ಕಾರ್ಯದರ್ಶಿ – ಹಸೈನಾರ್ ಕಾಟಿಪಳ್ಳ
ಶಿಕ್ಷಣ ವಿಭಾಗ:
ಅಧ್ಯಕ್ಷ – ಮೊಯ್ದೀನ್ ಸಿದ್ದಾಪುರ
ಕಾರ್ಯದರ್ಶಿ – ಇಬ್ರಾಹಿಂ ಸುಟ್ಟ
ಸಾಂತ್ವನ ವಿಭಾಗ:
ಅಧ್ಯಕ್ಷ – ಅಕ್ಬರ್ ದೇರಳಕಟ್ಟೆ
ಕಾರ್ಯದರ್ಶಿ – ಝುಬೈರ್ ತುರ್ಕಳಿಕೆ
ಪಬ್ಲಿಕೇಶನ್ ವಿಭಾಗ:
ಅಧ್ಯಕ್ಷ – ಇರ್ಫಾನ್ ಬಜ್ಪೆ
ಕಾರ್ಯದರ್ಶಿ – ತಾಜುದ್ದೀನ್ ಮೆಲ್ಕಾರ್.
ಇಹ್ಸಾನ್ ವಿಭಾಗ :
ಅಧ್ಯಕ್ಷ – ನಿಯಾಝ್ ಕೂರ್ನಾಡ್
ಕಾರ್ಯದರ್ಶಿ – ಸೂಫಿ ಇಬ್ರಾಹಿಂ ಉಡುಪಿ.
ಕಾರ್ಯಕಾರಿ ಸಮಿತಿ ಸದಸ್ಯರು:
ನಿಸ್ತಾರ್ ಮಡಿಕೇರಿ
ಸಿದ್ದೀಕ್ ಹಂಡುಗೋಳಿ
ಫಾರೂಕ್ ಕೃಷ್ಣಾಪುರ
ಸಿದ್ದೀಕ್ ಕೃಷ್ಣಾಪುರ
ಜಮಾಲ್ ಸಾಂಬಾರ್’ತೋಟ
ಅಶ್ರಫ್ ವಳಚ್ಚಿಲ್
ಸಲೀಂ ಉಳ್ಳಾಲ
ಬಶೀರ್ ಮಡಂತ್ಯಾರ್
ಅಬೂಬಕ್ಕರ್ ಈಶ್ವರಮಂಗಳ
ಅಶ್ರಫ್ ಕೆ.ಸಿ.ರೋಡ್
ಸೌಫಲ್ ಕಿನ್ನಿಗೋಳಿ
ಪಬ್ಲಿಕೇಶನ್ ವಿಭಾಗ ಕೆಸಿಎಫ್ ದೋಹ ಝೋನ್






