ಬೆಂಗಳೂರು: ಖೋಟಾನೋಟು ಚಲಾವಣೆ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ, 33 ಲಕ್ಷ ರೂ ವಶ
ಬೆಂಗಳೂರು: ನಗರದಲ್ಲಿ ಖೋಟಾನೋತು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋತು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಕ್ಯಾಮರೂನ್ ದೇಶದ ಡಿಯೊಡೊನೆ ಕ್ರಿಸ್ಪೊಲ್(35) ಎಂದು ಗುರುತಿಸಲಾಗಿದೆ.ಈತ ಬಾಣಸವಾಡಿ ಸುಬ್ಬಯ್ಯನ ಪಾಳ್ಯದಲ್ಲಿ ವಾಸವಾಗಿದ್ದ.ಈತನೊಡನೆ ಇನ್ನೂ ಹಲವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೋಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ.
ಬಂಧಿತ ಕ್ರಿಸ್ಪೊಲ್ನ ಮನೆ ಮೇಲೆ ದಾಳಿ ಮಾಡಿದ್ದ ಪೋಲೀಸರು ಖೋಟಾನೋಟಿನ ಜತೆಗೆ ಎರಡು ಕಲರ್ ಪ್ರಿಂಟರ್ಗಳು, ಖಾಲಿ ಪೇಪರ್ಗಳು, ಸ್ಟಿಕರ್ ಕಟ್ಟರ್,ಮೊಬೈಲ್ ಹಾಗೂ ಆರೋಪಿಯ ಪಾಸ್ಪೋರ್ಟ್ ಜಪ್ತಿ ಮಾಡಿದ್ದಾರೆ. 2017ರಲ್ಲಿ ಪ್ರವಾಸಿ ವೀಸಾದ ಮೂಲಕ ಬಾರತಕ್ಕೆ ಆಗಮಿಸಿದ್ದ ಈತ ವೀಸಾವನ್ನು ನವೀಕರಣ ಮಾಡದೆ ಇಲ್ಲೇ ನೆಲೆಸಿದ್ದಾನೆ.ಅಲ್ಲದೆ ಇಲ್ಲಿನ ಹಣವನ್ನು ಕಲರ್ಪ್ರಿಂಟರ್ ಮೂಲಕ ನಕಲಿ ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ಮುದ್ರಿಸಿ ಚಲಾವಣೆ ಮಾಡಿರುವ ಖೋಟಾನೋಟುಗಳು ಸಾರ್ವಜನಿಕರ ಕೈ ಸೇರುವ ಸಾಧ್ಯತೆಯಿದ್ದು, ವ್ಯವಹಾರ ನಡೆಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್