ರಿಯಾದ್: ಸೌದಿ ಅರೇಬಿಯಾದ ಚಿಲ್ಲರೆ ವ್ಯಾಪಾರ ಕೇಂದ್ರಗಳಲ್ಲಿ ಇಲೆಕ್ಟ್ರಾನಿಕ್ ಪೇಮೆಂಟ್ ಸೌಕರ್ಯವನ್ನು ಕಡ್ಡಾಯಗೊಳಿಸಲು ನಿರ್ದೇಶನ ನೀಡಲಾಗಿದೆ. 14 ತಿಂಗಳ ಒಳಗೆ ದೇಶದ ಎಲ್ಲಾ ಚಿಲ್ಲರೆ ವ್ಯಾಪಾರ ಕೇಂದ್ರಗಳಲ್ಲೂ ಇ-ಪೇಮೆಂಟ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು.
ತೈಲ ಕೇಂದ್ರಗಳು ಮತ್ತು ಅನುಬಂಧಿತ ಸರ್ವೀಸ್ ಕೇಂದ್ರಗಳಲ್ಲಿ ರವಿವಾರದಿಂದ ಈ ಸೇವೆಯು ಪ್ರಾರಂಭಗೊಳ್ಳಲಿದೆ.
ಇಂಧನ ಕೇಂದ್ರಗಳು, ಅನುಬಂಧಿತ ಸರ್ವೀಸ್ ಕೇಂದ್ರಗಳಲ್ಲಿ ಗ್ರಾಹಕರಿಗೆ ದುಲ್ಖಅದ್ 11, ಅಥವಾ ಮುಂದಿನ ರವಿವಾರದಿಂದ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಮೂರು ತಿಂಗಳ ಹಿಂದೆ ಮುನಿಸಿಪಲ್, ಗ್ರಾಮೀಣ ಸಚಿವಾಲಯ ಆದೇಶ ನೀಡಿತ್ತು. ಇದಕ್ಕಾಗಿ ನಾಲ್ಕು ಸಾವಿರದಷ್ಟು ಯಂತ್ರಗಳನ್ನು ವಿವಿಧ ಇಂಧನ ಕೇಂದ್ರಗಳು ಮತ್ತು ಸರ್ವೀಸ್ ಕೇಂದ್ರಗಳಿಗೂ ರವಾನೆ ಮಾಡಲಾಗಿದೆ.
ಇದರ ಹೊರತಾಗಿ ಎಲ್ಲಾ ಚಿಲ್ಲರೆ ವ್ಯವಹಾರ ಕೇಂದ್ರಗಳಿಗೂ ಈ ವ್ಯವಸ್ಥೆ ಜಾರಿಗೊಳಿಸುವುದಾಗಿ ಭಯೋತ್ಪಾದನಾ ವಿರುದ್ದ ಪ್ರೊಗ್ರಾಮ್ ತಿಳಿಸಿದೆ. ದೇಶದಲ್ಲಿ ಕರೆನ್ಸಿಯೇತರ ವಿನಿಮಯವನ್ನು ಪ್ರೋತ್ಸಾಹಿಸುವ ಭಾಗವಾಗಿ ಈ ನಡೆ ಎನ್ನಲಾಗಿದೆ. ಮುಂದಿನ ವರ್ಷ ಆಗಸ್ಟ್ ಒಳಗೆ ಸಂಪೂರ್ಣ ಸಣ್ಣ ವ್ಯವಹಾರ ಕೇಂದ್ರಗಳಿಗೂ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ವ್ಯವಹಾರ ಹೂಡಿಕೆ ಸಚಿವಾಲಯ, ಮುನಿಸಿಪಲ್ ಗ್ರಾಮೀಣ ಖಾತೆಯ ಸಚಿವಾಲಯ, ಸೌದಿ ಅರೇಬಿಯನ್ ನಾಣ್ಯ ಏಜೆನ್ಸಿ ಮುಂತಾದವುಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ