ಉಳ್ಳಾಲ: ಪವಿತ್ರ ಹಜ್ ಕರ್ಮ ನಿರ್ವಹಿಸಲು ಮಕ್ಕಾಕೆ ತೆರಳಲಿರುವ ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಪ್ರತೀ ವರ್ಷ ನಡೆಸಿಕೊಂಡು ಬರುವಂತೆ ದಿನಾಂಕ 07.07.2019 ಆದಿತ್ಯವಾರ ಅಸರ್ ನಮಾಝ್ ಬಳಿಕ SYS SSF ಅಜ್ಜಿನಡ್ಕ ಶಾಖಾ ಕಛೇರಿಯಲ್ಲಿ ನಡೆಯಿತು.
ಹಜ್ ಅಮೀರ್ ಬಹು|ಉಸ್ಮಾನ್ ಮದನಿ ದುಆ ನಡೆಸಿ ಹಜ್ ತರಗತಿ ನಡೆಸಿದರು.ಬಹು| ಮುಹಮ್ಮದ್ ಶರೀಫ್ ಸಅದಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಜ್ ಯಾತ್ರೆಗೆ ತೆರಳುತ್ತಿರುವ ಬಹು|ಮುಹಮ್ಮದ್ ಶರೀಫ್ ಸಅದಿ, ಕುಞ್ಞಹ್ಮದ್ ಅಜ್ಜಿನಡ್ಕ,ಇಬ್ರಾಹಿಂ ಉಚ್ಚಿಲ, ಉಮರ್ ಮಾಸ್ಟರ್ ಹಿದಾಯತ್ ನಗರ ರವರನ್ನು ಶಾಲು ಹೊದಿಸಿ ಬೀಳ್ಕೊಡಲಾಯಿತು.
SYS ಕೆ ಸಿ ರೋಡ್ ಸೆಂಟರ್ ಅಧ್ಯಕ್ಷ ಜನಾಬ್|ಉಮರ್ ಮಾಸ್ಟರ್ ,ಬದ್ರಿಯಾ ಜುಮಾ ಮಸೀದಿ ಅಜ್ಜಿನಡ್ಕ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

SYS ಅಜ್ಜಿನಡ್ಕ ಬ್ರಾಂಚ್ ಅಧ್ಯಕ್ಷ ಅಬ್ದುಲ್ಲಾ MM, ಪ್ರಧಾನ ಕಾರ್ಯದರ್ಶಿ ಹಂಝ KM, SSF ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಸಿದ್ದೀಖ್ ಕೊಮರಂಗಳ, SSF ಅಜ್ಜಿನಡ್ಕ ಶಾಖಾಧ್ಯಕ್ಷ ಮುಸ್ತಫ ಕೆ.ಪಿ ಹಾಗೂ SYS ನಾಯಕರು, SSF ಕಾರ್ಯಕರ್ತರು ಉಪಸ್ಥಿತರಿದ್ದರು.
ಅಜ್ಜಿನಡ್ಕ ಶಾಖಾ ಉಪಾಧ್ಯಕ್ಷ ಫೈಝಲ್ ಮುಸ್ಲಿಯಾರ್ ಸ್ವಾಗತಿಸಿ, ಅಜ್ಜಿನಡ್ಕ ಶಾಖಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಫೀಫ್ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ