janadhvani

Kannada Online News Paper

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ಇದರ 2019 -2020 ನೇ ಸಾಲಿನ ಮಹಾಸಭೆಯು ದಿನಾಂಕ 05 /07 /19 ಶುಕ್ರವಾರ ಜುಮಾ ನಮಾಝಿನ ಬಳಿಕ ಬಹರೈನ್ ನ ಸಗಯ್ಯ ಪಾರ್ಟಿ ಹಾಲ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು| ಫಾರೂಕ್ ಎಸ್ ಎಂ ರವರ ಅಧ್ಯಕ್ಷೆತೆಯಲ್ಲಿ,ಬಹು|ಮಜೀದ್ ಸಅದಿ ಉಸ್ತಾದ್ ರವರ ದುಆ ದೊಂದಿಗೆ ಆರಂಭಗೊಂಡಿತು.

ಪ್ರಸ್ತುತ ಸಭೆಯನ್ನು ಸಂಘಟನಾ ವಿಭಾಗದ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ರವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಐಎನ್ಸಿ ಪ್ರತಿನಿಧಿ ಬಹು|ಅಲಿ ಮುಸ್ಲಿಯಾರ್ ರವರು ಉದ್ಘಾಟಿಸಿದರು.

2017-2019 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಅಝೀಝ್ ಸುಳ್ಯ ರವರು ಮಂಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಕೆ ಸಿ ಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಫಾರೂಕ್ ಎಸ್ ಎಂ ರವರು ಕಳೆದ ಐದು ವರ್ಷಗಳ ಕಾಲ ಮಾಡಿರುವ ಸಾಧನೆಗಳನ್ನು ವಿವರಿಸುತ್ತಾ , ಕೆಸಿಎಫ್ ಬಹರೈನಿನ ಉನ್ನತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ನಂತರ 2017 -19 ನೇ ಸಾಲಿನ ಸಮಿತಿಯನ್ನು ಬರ್ಕಾಸ್ತುಗೊಳಿಸಿ, 2019 -20 ನೇ ಸಾಲಿನ ಹೊಸ ಸಮಿತಿಗೆ ಚುನಾವಣಾಧಿಕಾರಿಯಾದ ಡಾ| ಶೈಕ್ ಬಾವ ರವರು ಚಾಲನೆಯನ್ನು ನೀಡಿದರು. ಮತದಾನದ ಮೂಲಕ ಹೊಸ ಸಮಿತಿಯ ಅಧ್ಯಕ್ಷರಾಗಿ ಜನಾಬ್| ಜಮಾಲುದ್ದೀನ್ ವಿಠ್ಠಲ್ ರವರನ್ನು ಆರಿಸಲಾಯಿತು ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಸಂಪ್ಯ ರವರು ಪುನರಾಯ್ಕೆ ಯಾದರು. ಕೋಶಾಧಿಕಾರಿಯಾಗಿ ಇಕ್ಬಾಲ್ ಮಂಜನಾಡಿ ರವರನ್ನು ಆಯ್ಕೆಮಾಡಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳು.

ಅಧ್ಯಕ್ಷರು: ವಿಟ್ಟಲ್ ಜಮಾಲುದ್ದೀನ್
ಪ್ರ.ಕಾರ್ಯದರ್ಶಿ: ಹಾರಿಸ್ ಸಂಪ್ಯ
ಕೋಶಾಧಿಕಾರಿ: ಇಕ್ಬಾಲ್ ಮಂಜನಾಡಿ

ಸಂಘಟನಾ ಇಲಾಖೆ:
ಅಧ್ಯಕ್ಷರು: ಸಮದ್ ಉಜಿರೆಬೆಟ್ಟು
ಕಾರ್ಯದರ್ಶಿ: ಸೂಫಿ ಪಯಂಬಚಾಲ್

ಶಿಕ್ಷಣ ಇಲಾಖೆ
ಅಧ್ಯಕ್ಷರು: ಕಲಂದರ್ ಮುಸ್ಲಿಯಾರ್ ಕಕ್ಕೆಪದವು
ಕಾರ್ಯದರ್ಶಿ: ಮನ್ಸೂರ್ ಬೆಳ್ಮ

ವೆಲ್ಫೇರ್ ಇಲಾಖೆ
ಅಧ್ಯಕ್ಷರು: ಕರೀಂ ಉಚ್ಚಿಲ್
ಕಾರ್ಯದರ್ಶಿ: ಹನೀಫ್ ಜಿ ಕೆ

ಆಡಳಿತ ಇಲಾಖೆ
ಅಧ್ಯಕ್ಷರು: ಅಬ್ದುಲ್ ಅಝೀಝ್ ಸುಳ್ಯ
ಕಾರ್ಯದರ್ಶಿ: ಸವಾದ್ ಉಳ್ಳಾಲ

ಇಹ್ಸಾನ್ ಇಲಾಖೆ
ಅಧ್ಯಕ್ಷರು: ಮಜೀದ್ ಮಾದಾಪುರ
ಕಾರ್ಯದರ್ಶಿ: ಹನೀಫ್ ಕಿನ್ಯ

ಪಬ್ಲಿಕೇಷನ್ ವಿಭಾಗ
ಅಧ್ಯಕ್ಷರು: ಲತೀಫ್ ಪೇರೋಳಿ
ಕಾರ್ಯದರ್ಶಿ: ತೌಫೀಕ್ ಬೆಳ್ತಂಗಡಿ
ಐ ಟೀಂ ಮತ್ತು ಸನ್ನದ್ದ ಸೇನೆಯ ನಾಯಕನಾಗಿ ರಿಯಾಜ್ ಸುಳ್ಯ ರವರನ್ನು ಮತ್ತು ಸದಸ್ಯರನ್ನು
ಹಾಗೂ ಕಾರ್ಯಕಾರಿ ಸಮಿತಿಗೆ ಹತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಐ ಎನ್ ಸಿ ಬಹರೈನ್ ಪ್ರತಿನಿಧಿಳಾಗಿ
ಅಲಿ ಮುಸ್ಲಿಯಾರ್,
ಫಾರೂಕ್ ಎಸ್.ಎಂ ಹಾಗೂ
ಬಶೀರ್ ಕಾರ್ಲೆ ರವರನ್ನು ನೇಮಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಫೈನಾನ್ಸ್ ಕಂಟ್ರೋಲರ್ ಆದ ಡಾ|ಶೈಕ್ ಬಾವಾ ಹಾಗು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಐಎನ್ಸಿ ಕೌನ್ಸಿಲ್ ಫೈಸಲ್ ಕೃಷ್ಣಾಪುರ,ಡಿಕೆಎಸ್ಸಿ ಬಹರೈನ್ ಇದರ ಅಧ್ಯಕ್ಷ ರಾದ ಬಹು|ಮಜೀದ್ ಸಅದಿ ಉಸ್ತಾದವರು ಭಾಗವಹಿಸಿದರು.
ನೂತನ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ ರವರು ಕೆಸಿಎಫ್ ಬಹರೈನ್ ಇಷ್ಟರವರೆಗೆ ಮಾಡಿರುವ ಸಾಧನೆಗಳನ್ನು ಸ್ಲಾಘಿಸಿ ಮುಂದಿನ ಸಾಲಿನ ಸಮಿತಿಯನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ಎಲ್ಲರೂ ಸಂಘಟಿತರಾಗಿ ಪರಸ್ಪರ ಕೈಜೋಡಿಸಿಕೊಳ್ಳಬೇಕೆಂದು,ಹಾಗೂ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆಯನ್ನು ಇನ್ನಷ್ಟು ಸಕ್ರೀಯಗೊಳಿಸಬೇಕೆಂದು ಕರೆಯಿತ್ತರು.

ಕಾರ್ಯಕ್ರಮದ ನಿರೂಪಣೆಯನ್ನು ಆಡಳಿತ ವಿಭಾಗದ ಚೆಯರ್ಮನ್ ಬಷೀರ್ ಕಾರ್ಲೆ ರವರು ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೂತನ ಸಾಲಿನ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಧನ್ಯವಾದಗೈದು ಮೂರು ಸ್ವಲಾತಿನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

error: Content is protected !! Not allowed copy content from janadhvani.com