ಕುವೈತ್ ನಗರ: ಕುವೈತ್‌ನಲ್ಲಿರುವ ವೀದೇಶೀಯರು ಕೆಲಸ ಬದಲಾಯಿಸ ಬೇಕಿದ್ದರೆ ಇನ್ನು ಮುಂದೆ ದೇಶದಿಂದ ಹೊರಗೆ ಹೋಗಿ ಮತ್ತೊಂದು ವಿಸಾದಲ್ಲಿ ಬರಬೇಕು. ಯಾವುದಾದರೂ ವಿಸಾದಲ್ಲಿ ಬಂದು ಕೆಲಸ ಹುಡುಕುವವರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಹಿಂದಿರುವ ಉದ್ದೇಶವಾಗಿದೆ. ಅಲ್ಲದೆ ಇಪ್ಪತ್ತರಷ್ಟು ಹುದ್ದೆಗಳಿಗೆ ಬರಹ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರ್ಥಿಕ ಖಾತೆಯ ಸಚಿವಾಲಯ ವ್ಯಕ್ತಪಡಿಸಿದೆ.
ಯಾವುದಾದರೂ ವಿಸಾ ಪಡೆದು ಕುವೈತ್‌ಗೆ ಬಂದು ಉನ್ನತ ಹುದ್ದೆಯ ಕೆಲಸ ಪಡೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗತೊಡಗಿರುವ ಹಿನ್ನಲೆಯಲ್ಲಿ ಈ ನಡೆ ಸ್ವೀಕರಿಸಲಾಗಿದೆ ಎನ್ನಲಾಗಿದೆ. ಕುವೈತ್ ಗೆ ಬಂದ ನಂತರ ಪಡೆಯುವ ವಿದ್ಯಾಭ್ಯಾಸ ಯೋಗ್ಯತೆಯನ್ನು ಕೂಡ ವಿಸಾ ಬದಲಾವಣೆಗೆ ಪರಿಗಣಿಸಲಾಗುವುದಿಲ್ಲ.
ಅದೇ ರೀತಿ ಮುಂದಿನ ವರ್ಷದಿಂದ ಖಾಸಗಿ ವಲಯದಿಂದ ಸಾರ್ವಜನಿಕ ವಲಯಕ್ಕೂ, ಸಾರ್ವಜನಿಕ ವಲಯದಿಂದ ಖಾಸಗಿ ವಲಯಕ್ಕೂ ಇಖಾಮಾ ಬದಲಾವಣೆ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಒಂದೇ ವಲಯದಲ್ಲೂ ಇಖಾಮಾ ಬದಲಾವಣೆ ಮಾಡುವುದಕ್ಕೂ ಕಠಿಣ ನಿಯಂತ್ರಣ ತರಲಾಗುವುದು ಎಂದು ಖಾತೆಯ ಸಚಿವರು ವ್ಯಕ್ತಪಡಿಸಿದ್ದಾರೆ.
ಉನ್ನತ ವಿದ್ಯಾಭ್ಯಾಸ ಯೋಗ್ಯತೆ ಇದ್ದರೂ, ಕೆಲಸ ಬದಲಾವಣೆ ಸಾಧ್ಯವಿಲ್ಲ. ಕಾರ್, ಮೆಕ್ಯಾನಿಕ್, ಇಲೆಕ್ಟ್ರೀಷನ್, ಪ್ಲಂಬರ್ ಮುಂತಾದ ಇಪ್ಪತ್ತರಷ್ಟು ಕೆಲಸಗಳಿಗೆ ಬರಹ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ದೇಶದಲ್ಲಿ ಅಧಿಕ ಇರುವ ಪರಿಣಿತರಲ್ಲದ ಕೆಲಸಗಾರರ ಸಂಖ್ಯೆಯನ್ನು ಕಡಿಮೆಗೊಳಿಸುವುದು, ವಿಸಾ ವ್ಯಾಪಾರಗಳ ಮೂಲಕ ವಂಚಿತರಾಗುವವರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮುಂತಾದ ಉದ್ದೇಶಗಳಿಗಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ