janadhvani

Kannada Online News Paper

ಇಫ್ತಾರ್ ಕೂಟ: ಗಿರಿರಾಜ್ ಸಿಂಗ್ ಗೆ ಅಮಿತ್ ಶಾ ವಾರ್ನಿಂಗ್

ನವದೆಹಲಿ,ಜೂನ್.04: ಇತ್ತೀಚೆಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಭಾಗವಹಿಸಿದ್ದರು.

ಇದೀಗ ಇಫ್ತಾರ್ ಕೂಟದಲ್ಲಿ ಎನ್ಡಿಎ ನಾಯಕರು ಕಾಣಿಸಿಕೊಂಡಿರುವ ಫೋಟೋ ತಮ್ಮ ಟ್ವೀಟ್ನೊಂದಿಗೆ ಸಿಂಗ್ ಪೋಸ್ಟ್ ಮಾಡಿದ್ದಾರೆ. ಇದೇ ರೀತಿಯಲ್ಲಿ ನವರಾತ್ರಿ ಹಬ್ಬದ ವೇಳೆ ಫಲಾಹಾರ ಕೂಟ ಆಯೋಜಿಸಬೇಕಿತ್ತು. ಆದರೆ, ಮುಸ್ಲಿಂ ಇಫ್ತಾರ್ ಕೂಟ ಆಯೋಜಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡದೇ ಹಿಂದೇಟು ಹಾಕುತ್ತಿದ್ದೇವೆ ಎಂದು ಕುಟುಕಿದ್ದಾರೆ.

ಈ ಮಧ್ಯೆ ಸಿಂಗ್ ಟ್ವೀಟ್‍ಗೆ ಜೆಡಿಯು ವಕ್ತಾರ ಸಂಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವರ ವಿರುದ್ಧ ಕ್ರಮಕ್ಕೆ ಕೂಡ ಆಗ್ರಹಿಸಿದ್ದಾರೆ. ದ್ವೇಷ ಬಿತ್ತುವ ನಾಯಕರನ್ನೂ ನಿಯಂತ್ರಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾಗಿ ಗಿರಿರಾಜ್ ಸಿಂಗ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ” ಎಂದು ಜೆಡಿಯು ವಕ್ತಾರ ಹೇಳಿದ್ದಾರೆ.

ಈ ಸಂಬಂಧ ಗಿರಿರಾಜ್ ಸಿಂಗ್ಗೆ ತರಾಟೆ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಇನ್ನೊಮ್ಮೆ ಇಂತಹ ಹೇಳಿಕೆ ನೀಡದಂತೆ ಸೂಚಿಸಿದ್ಧಾರೆ.

ಇದನ್ನೂ ಓದಿರಿ...