janadhvani

Kannada Online News Paper

ಪಾಸ್ವಾನ್ ಇಫ್ತಾರ್ ಕೂಟದಲ್ಲಿ ನಿತೀಶ್ ಕುಮಾರ್-ಗಿರಿರಾಜ್ ಸಿಂಗ್ ಟೀಕೆ

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ಎಲ್‌ಜೆಪಿ ಪಕ್ಷದ ನಾಯಕ ರಾಮ ವಿಲಾಸ್ ಪಾಸ್ವಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಭಾಗವಹಿಸಿದ್ದರು.

ಎನ್‌ಡಿಎ ನಾಯಕರು ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿರುವ ಫೋಟೊ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ನಮ್ಮ ಧರ್ಮದ ಆಚರಣೆಗಳಿಗೆ ನಾವು ಯಾಕೆ ಹಿಂದೇಟು ಹಾಕುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಪ್ರೀತಿಯಿಂದ ನವರಾತ್ರಿ ಹಬ್ಬದ ವೇಳೆ ಈ ರೀತಿ ಫಲಾಹಾರ ಕೂಟ ಆಯೋಜಿಸಿದ್ದರೆ ಸುಂದರವಾದ ಚಿತ್ರಗಳು ಸಿಗುತ್ತಿದ್ದವು. ನಮ್ಮ ಕರ್ಮ ಮತ್ತು ಧರ್ಮದಲ್ಲಿ ನಾವು ಹಿಂದೇಟು ಹಾಕುತ್ತಿದ್ದು, ಬರೀ ಪ್ರದರ್ಶನ ಮಾಡುವುದರಲ್ಲಿ ನಾವು ಮುಂದಿದ್ದೇವೆ ಎಂದು ಗಿರಿರಾಜ್ ಟ್ವೀಟಿಸಿದ್ದಾರೆ.

ಸೋಮವಾರ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇಫ್ತಾರ್ ಕೂಟ ಆಯೋಜಿಸಿದ್ದರು.

error: Content is protected !! Not allowed copy content from janadhvani.com