ನವದೆಹಲಿ,ಜೂನ್.04: ಇತ್ತೀಚೆಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಭಾಗವಹಿಸಿದ್ದರು.
ಇದೀಗ ಇಫ್ತಾರ್ ಕೂಟದಲ್ಲಿ ಎನ್ಡಿಎ ನಾಯಕರು ಕಾಣಿಸಿಕೊಂಡಿರುವ ಫೋಟೋ ತಮ್ಮ ಟ್ವೀಟ್ನೊಂದಿಗೆ ಸಿಂಗ್ ಪೋಸ್ಟ್ ಮಾಡಿದ್ದಾರೆ. ಇದೇ ರೀತಿಯಲ್ಲಿ ನವರಾತ್ರಿ ಹಬ್ಬದ ವೇಳೆ ಫಲಾಹಾರ ಕೂಟ ಆಯೋಜಿಸಬೇಕಿತ್ತು. ಆದರೆ, ಮುಸ್ಲಿಂ ಇಫ್ತಾರ್ ಕೂಟ ಆಯೋಜಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡದೇ ಹಿಂದೇಟು ಹಾಕುತ್ತಿದ್ದೇವೆ ಎಂದು ಕುಟುಕಿದ್ದಾರೆ.
ಈ ಮಧ್ಯೆ ಸಿಂಗ್ ಟ್ವೀಟ್ಗೆ ಜೆಡಿಯು ವಕ್ತಾರ ಸಂಜಯ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇವರ ವಿರುದ್ಧ ಕ್ರಮಕ್ಕೆ ಕೂಡ ಆಗ್ರಹಿಸಿದ್ದಾರೆ. ದ್ವೇಷ ಬಿತ್ತುವ ನಾಯಕರನ್ನೂ ನಿಯಂತ್ರಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾಗಿ ಗಿರಿರಾಜ್ ಸಿಂಗ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ” ಎಂದು ಜೆಡಿಯು ವಕ್ತಾರ ಹೇಳಿದ್ದಾರೆ.
ಈ ಸಂಬಂಧ ಗಿರಿರಾಜ್ ಸಿಂಗ್ಗೆ ತರಾಟೆ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಇನ್ನೊಮ್ಮೆ ಇಂತಹ ಹೇಳಿಕೆ ನೀಡದಂತೆ ಸೂಚಿಸಿದ್ಧಾರೆ.
ಇನ್ನಷ್ಟು ಸುದ್ದಿಗಳು
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್
ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿ: ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ
ಖುರ್ಆನ್ ವಿರುದ್ಧ ಮತಿಗೆಟ್ಟ ಹೇಳಿಕೆ ನೀಡಿದ ಸ್ವಾಮೀಜಿ- ಕಠಿಣ ಕ್ರಮಕ್ಕೆ ಮುಸ್ಲಿಂ ಒಕ್ಕೂಟ ಆಗ್ರಹ
ಝಂಝಂ ಲೇಬಲಿನಲ್ಲಿ ಸಾದಾ ನೀರು ವಿತರಣೆ – ವಿದೇಶೀಯರ ಬಂಧನ
ಅತೃಪ್ತರು ಇಲ್ಲ ಸಲ್ಲದ ಆರೋಪ ಮಾಡಬೇಡಿ, ಕೇಂದ್ರಕ್ಕೆ ದೂರು ನೀಡಿ- ಬಿಎಸ್ ವೈ