janadhvani

Kannada Online News Paper

ಉಪ್ಪಳ ಮೊಗರ್ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್:ರಂಜಾನ್ ಕಿಟ್ ವಿತರಣೆ

ಉಪ್ಪಳ: ದಾನವು ವಿಪತ್ತುಗಳಿಂದ ರಕ್ಷಿಸಲ್ಪಡುತ್ತದೆ ಎಂಬ ಪ್ರವಾದಿ ವಚನದಂತೆ ಮುಸ್ಲಿಮರ ಪಾಲಿಗೆ ಪುಣ್ಯ ರಂಜಾನ್ ತಿಂಗಳ ಪ್ರಯುಕ್ತ 57 ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವೃತ 1 ರಂದು ವಿತರಿಸಲಾಯಿತು.

ಖಿದ್ಮತುಲ್ ಇಸ್ಲಾಮ್ ಫೌಂಢೆಷನ್ ಕಛೇರಿಯಲ್ಲಿ ನಾಡಿನ ಸಮಸ್ತ ನಾಗರಿಕರ ಉಪಸ್ಥಿತಿಯೊಂದಿಗೆ ಸ್ಥಳೀಯ ಖತೀಬ್ ಅಬೂಬಕ್ಕರ್ ಹನೀಫಿ ಉಸ್ತಾದರ ದುಆದೊಂದಿದೆ ಈ ಒಂದು ಪುಣ್ಯ ಕಾರ್ಯಕ್ಕೆ ಅಶ್ರಫ್ ಚೇಡಿ ಇವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು. ಖಿದ್ಮತುಲ್ ಇಸ್ಲಾಮ್ ಫೌಂಢೆಷನ್ ಇದರ ಸಂಚಾಲಕರಾದ ಸತ್ತಾರ್ ಹಾಜಿ ಮಾಕಾಳಿ ರಂಜಾನ್ ಕಿಟ್ ವಿತರಣೆ ಬಗ್ಗೆ ವಿಶ್ಲೇಷಣೆ ನೀಡಿದರು.

ಅರ್ಹ ಬಡ ಕುಟುಂಬಗಳಿಗೆ ಕೀಟ್ ವಿತರಿಸಲು ಕುಞಮೋನು ಚೆರಾಲ್ ಮಾಹಿತಿ ಕಲೆಹಾಕಿ ಪಟ್ಟಿಗೆ ತಯಾರಿಸಿದರು. ರಂಜಾನ್ ಕಿಟ್ ವಿತರಣೆಯ ಆಯೋಜಿಸಿದ ಈ ಕಾರ್ಯದಲ್ಲಿ ಬಶೀರ್ ಮಂಜಲ್ ಗುಡ್ಡ, ಅಬ್ದುಲ್ಲ ಚೇರಾಲ್ ಮತ್ತು ತೌಸೀರ್ ಮೊಗರ್ ಉಪಸ್ಥಿತರಿದ್ದರು. ಕುಞಮೊನು ಚೇರಾಲ್ ಕಾರ್ಯಕ್ರಮವನ್ನು ನಿರೂಪಿಸಿ ಮಹಮ್ಮದ್ ಎಂ.ಕೆ ವಂದಿಸಿದರು.

ವರದಿ : ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್
(ಮೀಡಿಯಾ ಟೀಮ್ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್)