janadhvani

Kannada Online News Paper

ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿ ಡಿ ಪಿ ಬೈತಾರ್ ಸಖಾಫಿ ಪುನರಾಯ್ಕೆ

ಈ ವರದಿಯ ಧ್ವನಿಯನ್ನು ಆಲಿಸಿ


ರಿಯಾದ್ : KCF ಸೌದಿ ರಾಷ್ಟೀಯ ಸಮಿತಿ ಮಹಾಸಭೆಯು ರಿಯಾದ್ ನ ಅಪೋಲೋ ಧಿಮೋರ್ ಹೋಟೆಲ್ ನಲ್ಲಿ ದಿನಾಂಕ 03 -05 -2019 ಶುಕ್ರವಾರ ಜರುಗಿತು. ಝೋನ್ ಗಳಿಂದ ಆಯ್ಕೆಯಾದ ರಾಷ್ಟೀಯ ಸಮಿತಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು. ಸಭೆಯ ಅಧ್ಯಕ್ಷತೆಯನ್ನು ಸೌದಿ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಮೌಲಾನಾ ಯೂಸುಫ್ ಸಖಾಫಿ ಬೈತಾರ್ ವಹಿಸಿದರು. ರಾಷ್ಟೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಸಿದ್ದಿಕ್ ಸಖಾಫಿ ಪೆರುವಾಯಿ ಉಸ್ತಾದರ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ICF ಸೌದಿ ರಾಷ್ಟೀಯ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಸಲಾಂ ವಡಗರ ಉದ್ಘಾಟಿಸಿದರು.

ಸಭೆಯಲ್ಲಿ ಕಳೆದ ವಾರ್ಷಿಕ ಸಾಲಿನ ವರದಿಯನ್ನು ರಾಷ್ಟೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಮತ್ತು ಲೆಕ್ಕ ಪಾತ್ರವನ್ನು ರಾಷ್ಟೀಯ ಸಮಿತಿಯ ಫೈನಾನ್ಸ್ ಸೆಕ್ರೆಟರಿ ಹಿದಾಯತ್ ತೀರ್ಥಹಳ್ಳಿ ವಾಚಿಸಿದರು. ಸಭೆಯು ವರದಿ ಮತ್ತು ಲೆಕ್ಕ ಪಾತ್ರವನ್ನು ಪರಿಶೀಲಿಸಿ ಅನುಮೋದಿಸಿತು.

ವೇದಿಕೆಯಲ್ಲಿ ಪ್ರಮುಖರಾಗಿ KCF ಅಂತಾರಾಷ್ಟ್ರೀಯ ಪದಾಧಿಕಾರಿಗಳಾದ NS ಅಬ್ದುಲ್ಲಾ ಮಂಜನಾಡಿ, PP ಹಾಜಿ ನಝೀರ್ ಕಾಶಿಪಟ್ನ, ಕಮರುದ್ದೀನ್ ಗೂಡಿನಬಳಿ ಹಾಜರಿದ್ದರು. ಮಹಾಸಭೆಗೆ KCF ಅಂತಾರಾಷ್ಟ್ರೀಯ ಪ್ರತಿನಿಧಿಯಾಗಿ ( RO ) ಜನಾಬ್ ಸಿದ್ದಿಕ್ ಮೊಂಟುಗೊಳಿ ಆಗಮಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ತೆಂಗಿನ ಮರದಂತಾಗಬೇಕು ಸಂಘಟನಾ ಕಾರ್ಯಕರ್ತರು ತೆಂಗಿನ ಮರವು ತನ್ನ ಒಂದೊಂದು ಗರಿಯನ್ನು ಕಳಚಿಕೊಳ್ಳುತಾ ಹೋದಾಗ ಮರದಲ್ಲಿ ತನ್ನ ಗುರುತನ್ನು ಹೇಗೆ ಉಳಿಸುತ್ತದೋ ಅದೇ ರೀತಿ ಕಾರ್ಯಕರ್ತರು ತನ್ನ ಜೀವನದಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸಿ ಸಮಾಜದಲ್ಲಿ ಒಂದು ಒಳ್ಳೆಯ ಹೆಸರನ್ನು ಬಾಕಿ ಉಳಿಸಬೇಕು. KCF ಕಳೆದ 6 ವರ್ಷಗಲ್ಲಿ ಸಾಧಿಸಿದ ಸಾಧನೆಗಳು ಮತ್ತು ನಾಯಕರಿಗೆ ಇರಬೇಕಾದ ಉತ್ತಮ ಗುಣ ನಡತೆಗಳ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು.

DP ಯೂಸುಫ್ ಸಖಾಫಿ ಬೈತಾರ್ ರವರು ಅಧ್ಯಕ್ಷೀಯ ಭಾಷಣ ಮಾಡುತ್ತಾ.. KCF ಕಳೆದ 6 ವರ್ಷಗಲ್ಲಿ ಬೆಳೆದು ಬಂದ ರೀತಿ ಮತ್ತು ಅದಕ್ಕೆ ಕಾರ್ಯಕರ್ತರು ಪಟ್ಟ ತ್ಯಾಗ, ಸಮಯ ಹಾಗೂ ಸಹಾಯವನ್ನು ನೆನಪಿಸಿದರು. ಸಂಘಟನೆಗಾಗಿ ಹಗಲಿರುಳು ದುಡಿದು ಕಾರಣಾಂತರಗಳಿಂದ ಪ್ರವಾಸ ಜೀವನವನ್ನು ಕೊನೆಗೊಳಿಸಿ ಭಾರತಕ್ಕೆ ಹಿಂದಿರುಗಿದ ನೇತಾರರ ಮತ್ತು ಕಾರ್ಯಕರ್ತರ ಸೇವೆಯನ್ನು ಮರೆಯಲು ಅಸಾಧ್ಯ ಎಂದು ನೆನಪಿಸಿಕೊಂಡರು.

ಮುಖ್ಯ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಸಿದ್ದಿಕ್ ಮೊಂಟುಗೋಳಿ ಯವರು ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟೀಯ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ದನ್ಯವಾದಗೈದರು. ಕಾರ್ಯಕ್ರಮದ ಯಶಸ್ವಿಗಾಗಿ ಅವಿರತ ಶ್ರಮವನ್ನು ವಹಿಸಿದ KCF ರಿಯಾದ್ ಝೋನ್ ನೇತಾರರಿಗೆ ಮತ್ತು ಕಾರ್ಯಕರ್ತರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು.

:- ನೂತನ ಸಮಿತಿ.

ಅಧ್ಯಕ್ಷರು: DP.ಯೂಸುಫ್ ಸಖಾಫಿ ಬೈತಾರ್
ಪ್ರಧಾನ ಕಾರ್ಯದರ್ಶಿ: ಸಾಲಿ ಬೆಳ್ಳಾರೆ
ಕೋಶಾಧಿಕಾರಿ : ಮೊಹಮ್ಮದ್ ಕಲ್ಲಾರ್ಬೆ

ಸಂಘಟನಾ ಇಲಾಖೆ
ಅಧ್ಯಕ್ಷರು : ಫೈಸಲ್ ಕೃಷ್ಣಾಪುರ
ಕಾರ್ಯದರ್ಶಿ : ಬಷೀರ್ ತಲಪಾಡಿ

ಶಿಕ್ಷಣ ಇಲಾಖೆ
ಅಧ್ಯಕ್ಷರು : ಸಿದ್ದಿಕ್ ಸಖಾಫಿ ಪೆರುವಾಯಿ
ಕಾರ್ಯದರ್ಶಿ : ಯಾಹಿಯಾ ಬಿಳಿಯೂರ್

ಸಾಂತ್ವನ ಇಲಾಖೆ
ಅಧ್ಯಕ್ಷರು : ಮೊಹಮ್ಮದ್ ಮಲೆಬೆಟ್ಟು
ಕಾರ್ಯದರ್ಶಿ : ಅಶ್ರಫ್ ಕಿನ್ಯ , ಮದೀನಾ

ಪ್ರಕಾಶನ ಇಲಾಖೆ
ಅಧ್ಯಕ್ಷರು : ಹಿದಾಯತ್ ತೀರ್ಥಹಳ್ಳಿ
ಕಾರ್ಯದರ್ಶಿ : ಅಶ್ರು ಬಜ್ಪೆ

ಆಡಳಿತ ಇಲಾಖೆ
ಅಧ್ಯಕ್ಷರು : ಅಬ್ದುಲ್ ಸಲಾಂ , ಎನ್ಮೂರು
ಕಾರ್ಯದರ್ಶಿ : ಇಸ್ಮಾಯಿಲ್ ಮೊಂಟೆಪದವು

ಇಹ್ ಸಾನ್ ಇಲಾಖೆ
ಅಧ್ಯಕ್ಷರು : ಜಿ. ಎಂ. ಹನೀಫಿ , ಜಿದ್ದಾ
ಕಾರ್ಯದರ್ಶಿ : ಹಂಝ ಮೈಂದಲ

:ಕಾರ್ಯಕಾರಿ ಸಮಿತಿ ಸದಸ್ಯರು

ಕಮರುದ್ದೀನ್ ಗೂಡಿನಬಳಿ,

N . S . ಅಬ್ದುಲ್ಲಾ
ರಾಯಿಸ್ಕೋ ಅಬೂಬಕ್ಕರ್
ನಜೀರ್ ಕಾಶಿಪಟ್ನ
ಫಾರೂಕ್ ಕಾಟಿಪಳ್ಳ
ಇಕ್ಬಾಲ್ ಕೈರಂಗಳ
ಇಸ್ಮಾಯಿಲ್ ಕಣ್ಣಂಗಾರ್
ಉಮರ್ ಅಳಕೆಮಜಲು
ಮುಸ್ತಾಫಾ ಹಾಸನ
ಸಿದ್ದಿಕ್ ಬಾಳೆಹೊನ್ನೂರ್
ತಾಜುದ್ದೀನ್ ಸುಳ್ಯ
ಅಸೀಫ್ ಗೂಡಿನಬಳಿ
ಹನೀಫ್ ಕಣ್ಣೂರ್.

ವರದಿ : ಪ್ರಕಾಶನ ಇಲಾಖೆ

error: Content is protected !! Not allowed copy content from janadhvani.com