janadhvani

Kannada Online News Paper

ನವೀನ ಮಾದರಿಯ 20 ರೂ. ನೋಟು ಶೀಘ್ರದಲ್ಲೇ ಬಿಡುಗಡೆ

ಬೆಂಗಳೂರು,ಏ. 27-ನವೀನ ಮಾದರಿಯಲ್ಲಿ 20 ರೂ. ಮುಖಬೆಲೆಯ ಹೊಸ ನೋಟು ಶೀಘ್ರದಲ್ಲೇ ಬಿಡುಗಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧತೆ ಮಾಡಿಕೊಂಡಿದೆ.

ಈ ಕುರಿತು ಆರ್‌ಬಿಐ ಅಧಿಸೂಚನೆ ಹೊರಡಿಸಿದ್ದು, ಹೊಸ 20 ರೂ.ನ ಬಣ್ಣ, ಮಾದರಿ ಹಾಗೂ ರೂಪಾಯಿಯೊಳಗಿನ ಇನ್ನಿತರ ಚಿತ್ರಣ ಕುರಿತು ಮಾಹಿತಿ ನೀಡಿದೆ.

ಹೊಸ 20 ರೂ. ನೋಟಿನಲ್ಲಿ ಆರ್‌ಬಿಐ ಗಾರ್ವನರ್ ಶಕ್ತಿಕಾಂತ್ ದಾಸ್ ಸಹಿ ಇರಲಿದೆ. ಭಾರತದ ಸಂಸ್ಕೃತಿ ಬಿಂಬಿಸುವ ಎಲ್ಲೋರ ಗುಹೆಗಳ ಚಿತ್ರ, ಮಹಾತ್ಮಗಾಂಧಿ ಸರಣಿಯ ಹೊಸ ನೋಟಿನ ಜೊತೆ ಹಳೆ 20 ರೂ. ನೋಟು ಕೂಡ ಚಾಲ್ತಿಯಲ್ಲಿ ಮುಂದುವರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

20 ರೂ. ಹೊಸ ನೋಟಿನ ಮುಂಭಾಗದ ಮಧ್ಯದಲ್ಲಿ ಮಹಾತ್ಮಗಾಂಧಿ ಫೋಟೊ ಇರಲಿದೆ. ಹಿಂದಿ ಮತ್ತು ಇಂಗ್ಲಿಷ್ ಅಂಕಿಯಲ್ಲಿ ನೋಟಿನ ಮೌಲ್ಯ ಇರಲಿದೆ. ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರುವ ನೋಟಿನ ಹಿಂದಿನ ಭಾಗದಲ್ಲಿ ಗುಹೆ ಚಿತ್ರವಿರಲಿದೆ. ಈ ನೋಟು 63 ಎಂಎಂ ಅಗಲ ಹಾಗೂ 129 ಮಿ.ಮೀ. ಉದ್ದವಿರಲಿದೆ.