ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಜಮ್ಇಯ್ಯತುಲ್ ಉಲಮಾ ಬಂಟ್ವಾಳ ತಾಲ್ಲೂಕು ಸಮಿತಿ ವತಿಯಿಂದ ಈ ತಿಂಗಳ 26ರಂದು ಮುಡಿಪು ಗೌಸಿಯ ಜುಮಾ ಮಸ್ಜಿದ್ ಸಭಾಂಗಣದ ಅಜ್ಮೀರ್ ಖಾಜಾ ವೇದಿಕೆಯಲ್ಲಿ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಸಯ್ಯಿದ್ ಹಬೀಬುಲ್ಲಾಹ್ ಪೂಕೋಯ ತಂಙಳ್ ಪೆರುವಾಯಿಯವರ ಅಧ್ಯಕ್ಷತೆಯಲ್ಲಿ ಬೃಹತ್ ಅಧ್ಯಯನ ಶಿಬಿರ ನಡೆಯಲಿದೆ.
ಎಸ್ ಜೆ ಯು ದ.ಕ ಜಿಲ್ಲಾ ಅಧ್ಯಕ್ಷರೂ ವಿದ್ವಾಂಸರೂ ಆದ ಬಿಕೆ ಮುಹಮ್ಮದ್ ಅಲೀ ಫೈಝಿ ಬಾಳೆಪುಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಖ್ಯಾತ ಚಿಂತಕರೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ ಆದ ಮುಹಮ್ಮದ್ ಅಲೀ ಸಖಾಫಿ ತೃಕರಿಪೂರುರವರು ಚೈನ್ ಬಿಸಿನೆಸ್ ಧರ್ಮಬದ್ಧವಾಗುವ ಮಾರ್ಗ-ಸಾಧ್ಯತೆಗಳು ಎಂಬ ವಿಷಯದಲ್ಲಿ ವಿಷಯ ಮಂಡಿಸಿ ಮಾತನಾಡಲಿದ್ದಾರೆ.
ಸುನ್ನೀ ಜಂಇಯ್ಯತುಲ್ ಉಲಮಾ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಎಸ್ಇಡಿಸಿ, ಸುನ್ನೀ ಯುವಜನ ಸಂಘ, ಸುನ್ನೀ ಮಾನೇಜ್ಮೆಂಟ್ ಅಸೋಸಿಯೇಷನ್, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಕೆಸಿಎಫ್ ಸಹಿತ ಎಲ್ಲಾ ಸುನ್ನೀ ಸಂಘ-ಸಂಸ್ಥೆಗಳ ಹಲವಾರು ನಾಯಕರು ಉಪಸ್ಥಿತರಿರುವರು ಎಂದು ಸಂಘಟನೆಯ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಕೊಡಂಗಾಯಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ