ತಿರುವನಂತಪುರಂ: ಹೃದಯಾಘಾತದಿಂದ ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಭಾರತದ ರಫೀಕ್(28) ಅವರ ಮೃತ ದೇಹಕ್ಕಾಗಿ ಸಂಬಂಧಿಕರು ಕಾದಿದ್ದರು. ಊರು ಸೇರಿದ ಶವ ಪೆಟ್ಟಿಯನ್ನು ತೆರೆಯುತ್ತಿದ್ದಂತೆ ಮನೆಮಂದಿಗೆಲ್ಲ ಆಘಾತ ಕಾದಿತ್ತು. ಆ ಪೆಟ್ಟಿಗೆಯಲ್ಲಿ ಮಹಿಳೆ ಶವವಿತ್ತು.
ಕುಮ್ಮನ್ನೂರ್ ಈಟ್ಟಿಮುಟ್ಟಿಲ್ ರಫೀಕ್(28) ಸೌದಿ ಅರೇಬಿಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಬುಧವಾರ ರಾತ್ರಿ ಹತ್ತು ಗಂಟೆಗೆ ಕಮ್ಮುನ್ನೂರಿನ ಮನೆಗೆ ಸೌದಿಯಿಂದ ವಿಮಾನ ಮೂಲಕ ಮೃತದೇಹ ಬಂದಿತ್ತು. ಮೃತದೇಹದ ಪೆಟ್ಟಿಗೆಯಲ್ಲಿ ಪಾಸ್‍ಪೋರ್ಟ್ ನಂಬರ್, ರಫೀಕ್ ಎಂಬೆಲ್ಲ ವಿವರಗಳನ್ನು ಬರೆದಿರಿಸಲಾಗಿತ್ತು. ಆದರೆ ಪೆಟ್ಟಿಗೆ ನೋಡಿದಾಗ ಅದರೊಳಗಿದ್ದ ಮೃತದೇಹ ಯುವಕನ ಬದಲು ಯುವತಿಯದ್ದಾಗಿತ್ತು.
ಸೌದಿ ಏರ್‍ಲೈನ್ಸ್ ವಿಮಾನದಲ್ಲಿ ನೆಡುಂಬಶ್ಶೇರಿ ವಿಮಾನ ನಿಲ್ದಾಣದಿಂದ ಸಂಬಂಧಿಕರು ಮೃತದೇಹವನ್ನು ಕೊಂಡು ಹೋಗಿದ್ದರು. ಸೌದಿ ಅರೇಬಿಯದಲ್ಲಿಯೇ ಮೃತದೇಹಕ್ಕೆ ಸ್ನಾನ ಮಾಡಿಸಿ ಪ್ಯಾಕ್ ಮಾಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ತಪ್ಪು ಸಂಭವಿಸಿಲ್ಲ ಎಂದು ಗಲ್ಫ್ ನಲ್ಲಿ ರಫೀಕ್ ಜೊತೆಗಿದ್ದವರು ಹೇಳುತ್ತಿದ್ದಾರೆ.
ಮಹಿಳೆಯ ಮೃತದೇಹವನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಹಾಗೂ ಮರಳಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ